ಬೆಳಕಿನ ಹನಿ
ಮೂಲ ಹಿಂದಿ ಕವಿತೆ: ಗುಲ್ಜಾರ್
ಕನ್ನಡ ಅನುವಾದ: ಸಿ.ಪಿ. ರವಿಕುಮಾರ್
ಬರಿದೆ ನೋಡು ಆ ಕಣ್ಣುಗಳಿಂದ ಹೊಮ್ಮುವ ಸುಗಂಧವನು
ಪ್ರೀತಿಗೊಂದು ಭಾಷೆಯಿಲ್ಲ, ಪ್ರೀತಿಗೆ ಸ್ವರವಿಲ್ಲ
ಕಣ್ಣುಗಳಲ್ಲಿ ಎಲ್ಲೋ ಅರಳಿ ನಗುವ ಮುಗುಳು
ರೆಪ್ಪೆಗಳ ಮೇಲೆ ಆಟವಾಡುವ ಬೆಳಕು
ಮೌನವಾಗಿದ್ದರೂ ಕಂಪಿಸುವ ತುಟಿಗಳಲಿ
ಘನಿತವಾಗಿವೆ ಕಥಾನಕಗಳೆಷ್ಟೊಂದು
ಖಾಮೋಶಿ ಚಿತ್ರದಲ್ಲಿ ದುರಂತನಾಯಕಿಯ ಪಾತ್ರದಲ್ಲಿ ವಹೀದಾ ರೆಹಮಾನ್ ಅಭಿನಯಿಸಿದ್ದಾರೆ. ಭಗ್ನಪ್ರೇಮದಿಂದ ಹುಚ್ಚನಾದ ಕವಿಯೊಬ್ಬ ಮಾನಸಿಕ ಆಸ್ಪತ್ರೆಗೆ ಸೇರುತ್ತಾನೆ. ಅವನನ್ನು ಪ್ರೀತಿಸುವ ನಟನೆ ಮಾಡುವಂತೆ ಒಬ್ಬ ನರ್ಸ್ ಳನ್ನು ಕೋರಲಾಗುತ್ತದೆ; ಈಕೆ ಹಿಂದೆ ಇಂಥದೇ ಸನ್ನಿವೇಶದಲ್ಲಿ ನಟಿಸಿ ಅದರಿಂದ ಮಾನಸಿಕವಾಗಿ ಆಯಾಸಗೊಂಡಿದ್ದಾಳೆ. ಆದರೂ ಒತ್ತಡಕ್ಕೆ ಮಣಿದು ಕೆಲಸಕ್ಕೆ ಒಪ್ಪುತ್ತಾಳೆ. ಮಾನಸಿಕ ರೋಗಿ ಗುಣವಾಗುತ್ತ ಹೋದಂತೆ ನಾಯಕಿಗೆ ಅವನಲ್ಲಿ ಪ್ರೇಮ ಹುಟ್ಟುತ್ತದೆ; ಆದರೆ ಅದನ್ನು ಅವಳು ಬಯಲು ಮಾಡಲಾರಳು. ಅವಳ ಮೌನರೂಪಿ ಪ್ರೇಮವನ್ನು ಈ ಗೀತೆ ಧ್ವನಿಸುತ್ತದೆ.
ಇಂದಿನ ವ್ಯಾಲೆಂಟೈನ್ಸ್ ಡೇ ಆಚರಣೆಯ ಸಂದರ್ಭದಲ್ಲಿ ಪ್ರೀತಿಗೊಂದು ಭಾಷೆಯಿಲ್ಲ ಎಂಬ ಮಾತು ಸುಳ್ಳಾಗಿದೆ! ಬೆಲೂನ್, ಚಾಕೊಲೆಟ್, ಗ್ರೀಟಿಂಗ್ ಕಾರ್ಡ್ ಮತ್ತು ಗುಲಾಬಿಗಳು ಮಾತಾಡುತ್ತಿವೆ!
ಕೈಯಿಂದ ಮುಟ್ಟಿ ತೊಡಿಸದಿರು ಸಂಬಂಧಗಳ ಬೇಡಿ
ಆತ್ಮದಿಂದ ಅನುಭವಿಸು, ಪ್ರೀತಿಯನ್ನು ಹಾಗೇ ಬಿಟ್ಟು ಬಿಡು
ಹಣೆಪಟ್ಟಿ ಹಚ್ಚದಿರು ಹೆಸರನ್ನು ನೀಡಿ
ಪ್ರೀತಿಗೊಂದು ಭಾಷೆಯಿಲ್ಲ, ಪ್ರೀತಿಗೆ ಸ್ವರವಿಲ್ಲ
ಕೇಳುವುದು, ಆಡುವುದು ಮೌನದಲ್ಲೆ.
ಆರದಿದು, ನಿಲ್ಲದಿದು, ನೆಲೆಸದಿದು ಎಲ್ಲೂ -
ಬೆಳಕಿನ ಹನಿ, ಯುಗಗಳಿಂದ ಹರಿಯುತ್ತಿದೆ.
ಕಣ್ಣುಗಳಲ್ಲಿ ಎಲ್ಲೋ ಅರಳಿ ನಗುವ ಮುಗುಳು
ರೆಪ್ಪೆಗಳ ಮೇಲೆ ಆಟವಾಡುವ ಬೆಳಕು
ಮೌನವಾಗಿದ್ದರೂ ಕಂಪಿಸುವ ತುಟಿಗಳಲಿ
ಘನಿತವಾಗಿವೆ ಕಥಾನಕಗಳೆಷ್ಟೊಂದು
ಕವಿತೆಯನ್ನು ಕುರಿತು
ಗುಲ್ಜಾರ್ ಅವರ ಈ ಕವಿತೆಯನ್ನು ಖಾಮೋಶಿ ಚಿತ್ರದಲ್ಲಿ ಗೀತೆಯನ್ನಾಗಿ ಬಳಸಲಾಗಿದೆ. ಈ ಕವಿತೆಯಲ್ಲಿ ಪ್ರೇಮದ ಬಗ್ಗೆ ಒಂದು ವ್ಯಾಖ್ಯಾನವಿದೆ.
ಪ್ರೀತಿಗೊಂದು ಭಾಷೆಯಿಲ್ಲ, ಪ್ರೀತಿಗೆ ಸ್ವರವಿಲ್ಲ
ಕೇಳುವುದು, ಆಡುವುದು ಮೌನದಲ್ಲೆ
ಆರದಿದು, ನಿಲ್ಲದಿದು, ನೆಲೆಸದಿದು ಎಲ್ಲೂ
ಬೆಳಕಿನ ಹನಿ, ಯುಗಗಳಿಂದ ಹರಿಯುತ್ತಿದೆ
ಗುಲ್ಜಾರ್ ಅವರ ಈ ಕವಿತೆಯನ್ನು ಖಾಮೋಶಿ ಚಿತ್ರದಲ್ಲಿ ಗೀತೆಯನ್ನಾಗಿ ಬಳಸಲಾಗಿದೆ. ಈ ಕವಿತೆಯಲ್ಲಿ ಪ್ರೇಮದ ಬಗ್ಗೆ ಒಂದು ವ್ಯಾಖ್ಯಾನವಿದೆ.
ಪ್ರೀತಿಗೊಂದು ಭಾಷೆಯಿಲ್ಲ, ಪ್ರೀತಿಗೆ ಸ್ವರವಿಲ್ಲ
ಕೇಳುವುದು, ಆಡುವುದು ಮೌನದಲ್ಲೆ
ಆರದಿದು, ನಿಲ್ಲದಿದು, ನೆಲೆಸದಿದು ಎಲ್ಲೂ
ಬೆಳಕಿನ ಹನಿ, ಯುಗಗಳಿಂದ ಹರಿಯುತ್ತಿದೆ
ಖಾಮೋಶಿ ಚಿತ್ರದಲ್ಲಿ ದುರಂತನಾಯಕಿಯ ಪಾತ್ರದಲ್ಲಿ ವಹೀದಾ ರೆಹಮಾನ್ ಅಭಿನಯಿಸಿದ್ದಾರೆ. ಭಗ್ನಪ್ರೇಮದಿಂದ ಹುಚ್ಚನಾದ ಕವಿಯೊಬ್ಬ ಮಾನಸಿಕ ಆಸ್ಪತ್ರೆಗೆ ಸೇರುತ್ತಾನೆ. ಅವನನ್ನು ಪ್ರೀತಿಸುವ ನಟನೆ ಮಾಡುವಂತೆ ಒಬ್ಬ ನರ್ಸ್ ಳನ್ನು ಕೋರಲಾಗುತ್ತದೆ; ಈಕೆ ಹಿಂದೆ ಇಂಥದೇ ಸನ್ನಿವೇಶದಲ್ಲಿ ನಟಿಸಿ ಅದರಿಂದ ಮಾನಸಿಕವಾಗಿ ಆಯಾಸಗೊಂಡಿದ್ದಾಳೆ. ಆದರೂ ಒತ್ತಡಕ್ಕೆ ಮಣಿದು ಕೆಲಸಕ್ಕೆ ಒಪ್ಪುತ್ತಾಳೆ. ಮಾನಸಿಕ ರೋಗಿ ಗುಣವಾಗುತ್ತ ಹೋದಂತೆ ನಾಯಕಿಗೆ ಅವನಲ್ಲಿ ಪ್ರೇಮ ಹುಟ್ಟುತ್ತದೆ; ಆದರೆ ಅದನ್ನು ಅವಳು ಬಯಲು ಮಾಡಲಾರಳು. ಅವಳ ಮೌನರೂಪಿ ಪ್ರೇಮವನ್ನು ಈ ಗೀತೆ ಧ್ವನಿಸುತ್ತದೆ.
ಇಂದಿನ ವ್ಯಾಲೆಂಟೈನ್ಸ್ ಡೇ ಆಚರಣೆಯ ಸಂದರ್ಭದಲ್ಲಿ ಪ್ರೀತಿಗೊಂದು ಭಾಷೆಯಿಲ್ಲ ಎಂಬ ಮಾತು ಸುಳ್ಳಾಗಿದೆ! ಬೆಲೂನ್, ಚಾಕೊಲೆಟ್, ಗ್ರೀಟಿಂಗ್ ಕಾರ್ಡ್ ಮತ್ತು ಗುಲಾಬಿಗಳು ಮಾತಾಡುತ್ತಿವೆ!
Kannada translation by C.P. Ravikumar of a Hindi poem by Gulzar
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ