ಸಂಜೆಯಿಂದಲೂ  ಏಕೋ ಕಣ್ಣಿನಲ್ಲಿ ತೇವ 

Silhouette Photo of Man With Backpack Standing in Seashore during Golden Hour
ಮೂಲ ಉರ್ದು ಗಜಲ್ : ಗುಲ್ಜಾರ್ 
ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 

ಸಂಜೆಯಿಂದಲೂ  ಏಕೋ ಕಣ್ಣಿನಲ್ಲಿ ತೇವ 
ಇಂದು ಮತ್ತೆ ಕಾಡುತ್ತಿದೆ ನಿನ್ನದೇ ಅಭಾವ 

ಉಸಿರಾದರೂ ಆಡುತ್ತಿದ್ದೆ ಹೂತಿದ್ದರೆ ನೆಲದಲ್ಲಿ 
ನಾಡಿ ಮಿಡಿತವು ಯಾಕೋ ನಿಂತಂಥ ಭಾವ 

ಕಾಲವೆಂಬುದು ಒಂದೆಡೆಗೆ ನಿಲ್ಲದು ಬಚ್ಚಿಟ್ಟುಕೊಂಡು  
ಮಾನವರಂತೆ ಅದರ ಕಾರ್ಯವಿಧಿ ಕೂಡಾ 

ಈಗ ಯಾವ ಸಂಬಂಧವೂ ಉಳಿದಿಲ್ಲ, ಆದರೂ 
ಕರ್ತವ್ಯವೆಂಬಂತೆ ಕೈ ಮುಗಿದು ನಮಸ್ಕಾರ


Kannada translation by C.P. Ravikumar of an Urdu Gazal by Gulzar  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)