ಉರುವಲು



ಮೂಲ ಹಿಂದಿ ಕವಿತೆ: ಗುಲ್ಜಾರ್
ಕನ್ನಡಕ್ಕೆ : ಸಿ.ಪಿ. ರವಿಕುಮಾರ್

ಚಿಕ್ಕವಯಸ್ಸಿನಲ್ಲಿ ನಮಗೊಂದು ಆಟ 
ಅಮ್ಮ ಬೆರಣಿ ತಟ್ಟುತ್ತಿದ್ದಾಳೆ 

ನಾವು ಹೋಗಿ ಬೆರಣಿಯಲ್ಲಿ  
ನಮ್ಮ ಚಹರೆ ಬರೆಯುವವರು 
ಕಣ್ಣು ಬರೆದು ಹುಬ್ಬು ತೀಡಿ
ಭೇಷಾಗೊಂದು ಮೂಗು 
ಕೆಳಗೆ ತೆರೆದ ಬಾಯಿ 
ಕಿವಿಗೆ  ಅಲಂಕಾರದ ಮಾಟ 
ಒಂದಕ್ಕೆ ಟೋಪಿ ಇನ್ನೊಂದಕ್ಕೆ ಪೇಟ 
ಇದು ನನ್ನ ಬೆರಣಿ 
ಅದು  ನಿನ್ನ ಬೆರಣಿ 
ಹೀಗೆ ಸಾಲಾಗಿ ಚಹರೆಗಳ ಸರಣಿ 

ಸೂರ್ಯ ಬರುವನು ಬೆಳಗ್ಗೆ ನಗುನಗುತ್ತ 
ಅವನಿಗೆ ಬೆರಣಿಗಳೊಂದಿಗೆ ಆಟ 
ಸಂಜೆಯ ಒಲೆ ಉರಿಯುವಾಗ 
ಅಲ್ಲಿ ನೆರೆಯುವುದು ಮಕ್ಕಳ ಕೂಟ 
ಇವತ್ತು ಯಾರ ಬೆರಣಿ ಉರಿದು ಬೂದಿ?
ಪಂಡಿತನದೆ? ಪುಟ್ಟನದೇ?  ದಶರಥನದೇ ಸರದಿ?

ಇದೆಲ್ಲಾ ಆಗಿ ವರ್ಷಗಳೇ ಸಂದಿವೆ 
ಸ್ಮಶಾನದಲ್ಲಿ ಕುಳಿತಿದ್ದೇನೆ  ಯೋಚಿಸುತ್ತಾ 
ಭೀಕರ ಮೌನದ ರಾತ್ರಿ 
ಅಗೋ ಹೊತ್ತು ಉರಿಯುವ ಇಂದಿನ ಒಲೆಯಲ್ಲಿ 
ಇನ್ನೊಬ್ಬನ ಬೆರಣಿ ಭಸ್ಮವಾಗಿ ಪರಿಸಮಾಪ್ತಿ 


Kannada translation of a poem by Gulzar
Translated by C.P. Ravikumar


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)