ಚಂದ್ರನ ಅಂಗಿ
ಮೂಲ ಹಿಂದಿ ಬಾಲಕವಿತೆ: ರಾಮಧಾರಿ ಸಿಂಹ್ "ದಿನಕರ್"
ಕನ್ನಡ ಭಾಷಾಂತರ: ಸಿ.ಪಿ. ರವಿಕುಮಾರ್
ಹೀಗಾಯಿತು ಒಮ್ಮೆ, ಚಂದ್ರಮನು ಗೋಗರೆದ ತಾಯ ಬಳಿ ಬಂದು
"ಅಮ್ಮಾ! ಹೊಲಿಸಿಕೊಡು ಚಂದದ ಅಂಗಿ ನನಗೊಂದು
ನೋಡಮ್ಮಾ ಬರಿಮೈಯಲಿ ತಿರುಗುವೆ ಹನ್ನೆರಡೂ ಮಾಸಗಳು
ಬಿಸಿಲು ಮಳೆ ಚಳಿಗಾಳಿಯಲ್ಲಿ ನಲುಗುತ್ತಿದೆ ಹೊಂದೊಗಲು!"
ತಾಯಿಗೆ ನಗು ಬಂತು
ಕೊಟ್ಟಳು ಹೂಮುತ್ತು
"ಮಗೂ! ನನಗೆ ತಿಳಿಯದೇನಪ್ಪ ನಿನ್ನ ಕಷ್ಟ ಕೊರತೆ?
ಏನು ಮಾಡಲಿ! ಬದಲಾಯಿಸುವೆ ನೀನು ಪ್ರತಿದಿನವೂ ಅಳತೆ!
ಪೂರ್ಣನಾಗುವೆ ಒಮ್ಮೆ, ಅರೆಮೈಯೊಮ್ಮೆ, ಕೆಲವೊಮ್ಮೆ ಸಂಪೂರ್ಣ ಮಾಯ!"
ಬಾಡಿತು ಇಂದುಮುಖ, ಮರುಕ್ಷಣ ಅರಳಿತು, ಹೊಳೆಯಿತು ಒಂದು ಉಪಾಯ!
"ಸರಿಯಮ್ಮಾ! ಹೊಲಿಸಿಬಿಡು ಹಾಗಾದರೆ ಹೊಸಬಟ್ಟೆ ಒಂದಲ್ಲ ಹದಿನೈದು
ಧರಿಸುವೆ ಒಪ್ಪುವಳತೆಯ ಚಂದದಂಗಿ ಪ್ರತಿದಿನ ಬೇರೊಂದು!"
Translation by C.P. Ravikumar of a Children's Poem in Hindi by Ramdhari Singh "Dinakar"
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ