ಮುಪಾಸಾ - ಒಂದು ವ್ಯಕ್ತಿ ಚಿತ್ರ
ಮುಪಾಸಾ - ಒಂದು ವ್ಯಕ್ತಿ ಚಿತ್ರ ಸಿ ಪಿ ರವಿಕುಮಾರ್ ಎ ಮಿಲಿ ಜೋಲಾ ನಂತರ ಫ್ರೆಂಚ್ ಸಾಹಿತ್ಯದಲ್ಲಿ ಪ್ರಸಿದ್ಧಿಯ ತುದಿಯನ್ನೇರಿದವನು ಸಣ್ಣಕತೆಗಾರ ಗಿ ಡಿ ಮುಪಸಾ. ಮುನ್ನೂರಕ್ಕೂ ಹೆಚ್ಚು ಸಣ್ಣಕತೆಗಳನ್ನು ಮುಪಸಾ ಬರೆದ. ಸಣ್ಣಕತೆಗಳ ಸಾಮ್ರಾಜ್ಯದ ಅನಭಿಷಕ್ತ ಸಾಮ್ರಾಟ ಎಂದು ಅವನನ್ನು ಕರೆಯುತ್ತಾರೆ. ಸಣ್ಣಕತೆಗಳಲ್ಲದೆ ಸುಮಾರು ಇನ್ನೂರು ಲೇಖನಗಳು, ಆರು ಕಾದಂಬರಿಗಳು ಮತ್ತು ಮೂರು ಪ್ರವಾಸಕಥನಗಳು ಇವನ ಲೇಖನಿಯಿಂದ ಹೊರಬಿದ್ದವು. ಮುಪಾಸಾ ಹುಟ್ಟಿದ್ದು ಶ್ರೀಮಂತ ಕುಟುಂಬದಲ್ಲಿ (ಆಗಸ್ಟ್ 5, 1850). ತಾಯಿ ಲಾರಾ ಅಂದಿನ ಪ್ರಸಿದ್ಧ ಲೇಖಕ ಫ್ಲಾಬರ್ಟ್ ನ ಬಾಲ್ಯ ಸ್ನೇಹಿತೆ. ಹೀಗಾಗಿ ಮನೆಯಲ್ಲಿ ಸಾಹಿತ್ಯಕ ವಾತಾವರಣವಿತ್ತು. ಆದರೆ ತಂದೆ ಗುಸ್ತಾವ್ ಗೆ ಲೌಕಿಕ ವ್ಯವಹಾರಗಳಲ್ಲಿ ಹೆಚ್ಚು ಆಸಕ್ತಿ; ಸಾಹಿತ್ಯ-ಸಂಸ್ಕೃತಿಗಳ ಕಡೆ ಅಸಡ್ಡೆ. ಹೀಗಾಗಿ ಮುಪಸಾನ ತಂದೆ-ತಾಯಿ ಕ್ರಮೇಣ ದೂರವಾದರು. ಅವನು ಹದಿಮೂರು ವರ್ಷದ ಬಾಲಕನಾಗಿದ್ದಾಗ ಅವರು ವಿಚ್ಛೇದನ ಪಡೆದರು. ಬೋರ್ಡಿಂಗ್ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸ ನಡೆಯಿತು. ಬುದ್ಧಿವಂತ ಎಂಬ ಹೆಸರು ಗಳಿಸಿದರೂ ಅಸಭ್ಯ ಪದ್ಯ ಬರೆದ ಕಾರಣಕ್ಕೆ ಶಾಲೆಯಿಂದ ಮುಪಸಾನನ್ನು ಉಚ್ಚಾಟನೆ ಮಾಡಲಾಯಿತು. ಆಗ ಅವನ ತಾಯಿ ರೂವೆನ್ ಪಟ್ಟಣಕ್ಕೆ ಬಂದು ಮಕ್ಕಳನ್ನು ಬೇರೊಂದು ಶಾಲೆಗೆ ದಾಖಲು ಮಾಡಿದಳು. ತಾಯಿಯ ಬಲವಂತದ ಕಾರಣ ಹದಿನೇಳು ವರ್ಷದವನಾಗಿದ್ದಾಗ ಮುಪಸಾ ಲೇಖಕ ಫ್ಲಾಬರ್ಟ್ ನನ್ನು ಭೇಟಿಯಾದ. ಮುಪಸಾ