ಹೆದರಬೇಕೇ ಕೊರೊನಾವೈರಸಕ್ಕೆ (ಗಜಲ್)


ಸಿ.ಪಿ. ರವಿಕುಮಾರ್

ಯೋಚಿಸುತ್ತೇನೆ, ಹೆದರಬೇಕೇ  ಕೊರೊನಾ ವೈರಸಕ್ಕೆ
ಹೆದರಬೇಕಾಗಿರುವುದು ಕಾರಣವಿಲ್ಲದ ವಿರಸಕ್ಕೆ

ಬಂದೀತು ಇಂದಲ್ಲ ನಾಳೆ ಒಂದು ಆಂಟಿಬಯಾಟಿಕ್
ಯಾವ ಮದ್ದಿದೆ ಹೇಳಿ ಕಾರಣವಿಲ್ಲದ ವಿರಸಕ್ಕೆ

ಯಾರು ಹರಡಿ ಹಂಚಬೇಕೋ ಪ್ರೀತಿಯ ರಸವನ್ನು
ಧರ್ಮಗುರುಗಳು ಬೆರೆಸುತ್ತಾರೆ ಆಸಿಡ್ ರಸಕ್ಕೆ

ಹೆದರಿಸುತ್ತೀ ನೀನು ಹಣದ ಉಬ್ಬರ ನಿರುದ್ಯೋಗಗಳ ಬಗ್ಗೆ
ಒಳಗೆ ಟೊಳ್ಳಾದ ಬಳ್ಳಿಯೇ ಬೀಳುವುದು ಗಾಳಿಯ ರಭಸಕ್ಕೆ

ಹೆದರುತ್ತೀ ನೀನು ಭೂತಪಿಶಾಚಿಗಳಿಗೆ, ದುಷ್ಟಗ್ರಹಗಳಿಗೆ
ಒಪ್ಪಿಸಿಕೊಳ್ಳುವೆ ನಿನ್ನನ್ನೇ ಒಡೆದು ಆಳುವ ಅಂಕುಶಕ್ಕೆ

ಎಷ್ಟು ಸುಲಭ ದ್ವೇಷಿಸುವುದು ನಿನ್ನವರನ್ನು ನೀನು
ಹೆದರುತ್ತೇನೆ ನಾನು ಕಾರಣವಿಲ್ಲದ ಈ ದ್ವೇಷಕ್ಕೆ
#ಗಜಲ್

ಕಾಮೆಂಟ್‌ಗಳು

  1. ಪ್ರಸ್ತುತದಲ್ಲಿರುವ‌ ವೈದ್ಯಕೀಯ ಲೋಕ ಹಾಗೂ ರಾಜಕೀಯ ಲೋಕದ ಕಂಟಕಗಳನ್ನು ಮುಖಾಮುಖಿಯಾಗಿಸಿ ಕಟ್ಟಿರುವ ಗಜ಼ಲ್ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಅನ್ನಿಸಿಕೆಯನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಗಣೇಶ್ ಕುಮಾರ್.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)