ಬರುತಿದೆ ರವಿಯ ಸವಾರಿ!
ಮೂಲ - ಹರಿವಂಶರಾಯ್ ಬಚ್ಚನ್
ಅನುವಾದ - ಸಿ. ಪಿ. ರವಿಕುಮಾರ್

ಬರುತಿದೆ ರವಿಯ ಸವಾರಿ!
ನವಕಿರಣದ ಹೊಳೆವ ರಥ
ಬಿರಿವ ಮುಗುಳ ಕುಸುಮಪಥ
ಸ್ವಾಗತಿಸುವ ಮೇಘಸೈನ್ಯ ಸ್ವರ್ಣವಸ್ತ್ರಧಾರಿ!
ಬರುತಿದೆ ರವಿಯ ಸವಾರಿ!
ವಿಹಗ, ಭೃಂಗ, ಹೆಜ್ಜೇನು,
ಹಾಡುತ್ತಿವೆ ಕೀರ್ತಿಯನು
ತ್ಯಜಿಸಿ ರಣವ ತಾರಾಬಲ ಆಗುತಿದೆ ಪರಾರಿ!
ಬರುತಿದೆ ರವಿಯ ಸವಾರಿ!
ಕುಣಿದು ಜಯವ ಕೂಗಲು ಮನ
ಶಂಕಿಸುವುದು ಏಕೆ? ಹೀನ-
ನಂತೆ ನಿಂತ ನಿಶೆಯ ನೋಡಿ, ಭಿಕ್ಷುವೇಷಧಾರಿ!
ಬರುತಿದೆ ರವಿಯ ಸವಾರಿ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ