ಹಾಡುವರಾರು ನದೀತಟದಲ್ಲಿ?
ಮೂಲ ಹಿಂದಿ ಕವಿತೆ - ಹರಿವಂಶರಾಯ್ ಬಚ್ಚನ್
ಕನ್ನಡ ಅನುವಾದ - ಸಿ. ಪಿ. ರವಿಕುಮಾರ್
ಹಾಡುವರಾರು ನದೀತಟದಲ್ಲಿ?
ಭಂಗಗೊಳಿಸುತ್ತ ನಿಶೆಯ ನೀರವ
ಮೇಲೇಳುವ ಈ ಗ್ರಾಮೀಣ ಸ್ವರ
ಹಾಯುತ ಹುರುಳಿಯ ಹೊಲಗಳ ಮೇಲೆ
ಎಬ್ಬಿಸುತಿದೆ ಕಾವೇರಿಯೊಳು ಅಲೆ!
ಹಾಡುವರಾರು ನದೀತಟದಲ್ಲಿ?
ಬಂಧುಗಳಿರಬಹುದಿಲ್ಲೇ ಸನಿಹದಲಿ,
ಧ್ಯಾನಿಸುತ್ತ ಮೌನದಿ ಮನದಲ್ಲಿ,
ವ್ಯರ್ಥವಲ್ಲ ತಮ್ಮಯ ಆಲಾಪ,
ಶ್ರವಣಸುಖವ ತರುತಿದೆ ಜನಪದಕೆ!
ಹಾಡುವರಾರು ನದೀತಟದಲ್ಲಿ?
ವಿಚಲಿತವಾಗಿದೆ ಇಂದೇತಕೆ ಮನ
ಕೇಳುತ ಈ ಏಕಾಂತದ ಗಾಯನ?
ಇದನೇ ಕೇಳುತ ನಾ ಮುಂಜರಿವೆ!
ಇದನೇ ಹಾಡುವೆ, ಇದನೇ ಬರೆವೆ!
ಹಾಡುವರಾರು ನದೀತಟದಲ್ಲಿ?
ಕನ್ನಡ ಅನುವಾದ - ಸಿ. ಪಿ. ರವಿಕುಮಾರ್
ಹಾಡುವರಾರು ನದೀತಟದಲ್ಲಿ?
ಭಂಗಗೊಳಿಸುತ್ತ ನಿಶೆಯ ನೀರವ
ಮೇಲೇಳುವ ಈ ಗ್ರಾಮೀಣ ಸ್ವರ
ಹಾಯುತ ಹುರುಳಿಯ ಹೊಲಗಳ ಮೇಲೆ
ಎಬ್ಬಿಸುತಿದೆ ಕಾವೇರಿಯೊಳು ಅಲೆ!
ಹಾಡುವರಾರು ನದೀತಟದಲ್ಲಿ?
ಬಂಧುಗಳಿರಬಹುದಿಲ್ಲೇ ಸನಿಹದಲಿ,
ಧ್ಯಾನಿಸುತ್ತ ಮೌನದಿ ಮನದಲ್ಲಿ,
ವ್ಯರ್ಥವಲ್ಲ ತಮ್ಮಯ ಆಲಾಪ,
ಶ್ರವಣಸುಖವ ತರುತಿದೆ ಜನಪದಕೆ!
ಹಾಡುವರಾರು ನದೀತಟದಲ್ಲಿ?
ವಿಚಲಿತವಾಗಿದೆ ಇಂದೇತಕೆ ಮನ
ಕೇಳುತ ಈ ಏಕಾಂತದ ಗಾಯನ?
ಇದನೇ ಕೇಳುತ ನಾ ಮುಂಜರಿವೆ!
ಇದನೇ ಹಾಡುವೆ, ಇದನೇ ಬರೆವೆ!
ಹಾಡುವರಾರು ನದೀತಟದಲ್ಲಿ?
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ