ವೈವಾನುಗ್ರಹ
ವೈವಾ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದಲ್ಲ ಒಂದು ದಿವಸ ಎದುರಿಸಲೇಬೇಕಾದ ಅಗ್ನಿಪರೀಕ್ಷೆ. ಮೌಖಿಕ ಪರೀಕ್ಷೆಗೆ ನಾವು ವೈವಾ ಎನ್ನುವುದು ರೂಢಿಯಾದರೂ ಇದರ ಮೂಲ ವೀವಾ ವೋಸಿ ಎಂಬುದು. ಇಲ್ಲಿ ವೀವಾ ಎಂದರೆ ಜೀವಂತ ಎಂಬರ್ಥ. ನಾನು ಹುಡುಗನಾಗಿದ್ದಾಗ ವೀವಾ ಎಂಬ ಹಾರ್ಲಿಕ್ಸ್ ಮಾದರಿಯ ಪಾನೀಯ ಜನಪ್ರಿಯವಾಗಿತ್ತು. ಲಾಸ್ ಏಂಜಲೀಸ್ ನಗರದಲ್ಲಿ ವೀವಾ ಲ ಪಾಸ್ತಾ ಎಂಬ ಪಾಸ್ತಾ ಖಾದ್ಯಾಲಯದಲ್ಲಿ ತಾಜಾ ಪಾಸ್ತಾ ಮಾಡಿಕೊಡುತ್ತಾರೆ ಎಂಬ ಹೆಗ್ಗಳಿಕೆ. ವೀವಾ ಎಂಬುದನ್ನು ಲೈವ್ ಎಂದು ಈ ನಡುವೆ ಭಾಷಾಂತರಿಸುವ ರೂಢಿ ಬಂದಿದೆ. ಉದಾಹರಣೆಗೆ ಲೈವ್ ಟ್ರಾನ್ಸ್ಮಿಷನ್ ಎಂದರೆ ನೇರ ಜೀವಂತ ಪ್ರಸಾರ. ಇನ್ನು ವೀವಾ ವೋಸಿ ಎಂಬಲ್ಲಿ ವೋಸಿ ಎಂದರೆ "ಓಸಿ" ಎಂದು ಖಂಡಿತಾ ಅಪಾರ್ಥ ಮಾಡಬೇಡಿ. ವೋಸಿ ಎಂದರೆ ವಾಯ್ಸ್ ಅಥವಾ ಧ್ವನಿ. ವೀವಾ ವೋಸಿ ಎಂದರೆ "ಜೀವಂತ ಧ್ವನಿಯಲ್ಲಿ" ಎಂಬ ಅರ್ಥ. ಪರೀಕ್ಷಕರ ಮುಂದೆ ಜೀವಂತವಾಗಿ ಕೂತು ಆತನ ಅಥವಾ ಆಕೆಯ ಜೀವಂತ ಧ್ವನಿಯಲ್ಲಿ ಕೇಳಲ್ಪಡುವ ಪ್ರಶ್ನೆಗಳಿಗೆ ಸಾಧ್ಯವಾದಷ್ಟೂ ಜೀವಂತವಾಗಿ ಉತ್ತರಿಸಿ ಜೀವ ಉಳಿಸಿಕೊಳ್ಳುವ ಪರೀಕ್ಷೆಗೆ ಈಗ ವೈವಾ ಎಂಬ ಹೆಸರು ಬಂದಿದೆ. ಕೆಲವರು ವೈವಾಹಿಕ ಎಂಬುದರ ಚುಟುಕು ರೂಪ ಇದೆಂದು ತಪ್ಪು ಕಲ್ಪನೆ ಹರಡಿರುವುದು ಖೇದನೀಯ. ವೈವಾಹಿಕ ಜೀವನದಲ್ಲಿ ಜೀವಂತವಾಗಿದ್ದು ಜೀವಂತ ಧ್ವನಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಹಿಕಪ್ ಇಲ್ಲದೆ ಉತ್ತರಿಸಿ ಜೀವ ಉಳಿಸಿಕೊಂಡವರು ಹೆಚ್ಚು ಜನರಿಲ