ನನ್ನ ಪುಸ್ತಕಗಳು ಹೋದ ಕಡೆ
ನನ್ನ ಪುಸ್ತಕಗಳು ಹೋದ ಕಡೆ
ಮೂಲ: ಡಬ್ಲ್ಯು ಬಿ ಯೇಟ್ಸ್
ಅನುವಾದ: ಸಿ ಪಿ ರವಿಕುಮಾರ್
ನಾನು ಆರಿಸಿಕೊಂಡ ಎಲ್ಲಾ ಪದ ಸಮುಚ್ಚಯ
ಮತ್ತು ನಾನು ಬರೆದ ಸಮಸ್ತ ಪದಗಳು
ಬಿಚ್ಚಿ ರೆಕ್ಕೆಗಳನ್ನು ಹಾರಬೇಕು ನಿರಾಯಾಸ
ವಿರಮಿಸಕೂಡದು ಎಲ್ಲೂ ಹಾರಾಟದ ನಡುವೆ,
ಸೇರುವವರೆಗೂ ನಿನ್ನ ದುಃಖಿ ಹೃದಯವನ್ನು.
ಅಲ್ಲಿ ನಿನಗಾಗಿ ಹಾಡಬೇಕು ರಾತ್ರಿಯಲ್ಲಿ,
ದೂರದಲ್ಲಿ ಎಲ್ಲಿ ಚಲಿಸುವುದೋ ನೀರು
ಕಾರ್ಮೋಡದಿಂದ ಕಪ್ಪಾಗಿ ಅಥವಾ ನಕ್ಷತ್ರದೀಪ್ತವಾಗಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ