ನನ್ನೊಳಗೇ

  

ಮೂಲ: ಆಲ್ಬರ್ಟ್ ಕಾಮು

ಅನುವಾದ: ಸಿ ಪಿ ರವಿಕುಮಾರ್


ದ್ವೇಷದ ನಡುವೆ ಕಂಡುಕೊಂಡೆನು ನಾನು
ಇರುವುದು ಅಪರಾಜಿತ ಪ್ರೀತಿ ನನ್ನೊಳಗೆ

ಕಂಬನಿಯ ನಡುವೆ ಕಂಡುಕೊಂಡೆನು ನಾನು
ನನ್ನೊಳಗಿದೆ ಸೋಲೊಪ್ಪದ ಮುಗುಳ್ನಗೆ 

ಗೊಂದಲದ ನಡುವೆ ಕಂಡುಕೊಂಡೆನು ನಾನು
ಸೋಲಿಲ್ಲದ ಶಾಂತಿ ನನ್ನೊಳಗಿರುವುದನ್ನು

ನನಗಿದು ಸಂತೋಷದ ವಿಷಯ, ಏಕೆಂದರೆ
ಜಗತ್ತು ಎಷ್ಟೇ ಬಲವಾಗಿ ನೂಕಿದರೂ ನನ್ನನ್ನು

ನನ್ನೊಳಗೇ ಇದೆ ಅದಕ್ಕಿಂತಲೂ ಬಲಶಾಲಿ,
ಅದಕ್ಕಿಂತಲೂ ಸಮರ್ಥವಾದ ಎದುರಾಳಿ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)