ತೃಪ್ತರು
ನಾವು ಅಡಿಗೆ ಕೆಲಸ ಮಾಡುವುದಿಲ್ಲ, ಏಕೆಂದರೆ
ಕುಳಿತಲ್ಲೇ ಬರುತ್ತದೆ ಆರ್ಡರ್ ಮಾಡಿದರೆ
ನಾವು ಹೋಂ ವರ್ಕ್ ಮಾಡುವುದಿಲ್ಲ, ಏಕೆಂದರೆ
ಮಾಡಿಕೊಡುತ್ತದೆ ಏಐ ನೀಡದೆ ಯಾವ ತೊಂದರೆ
ಸ್ಕೂಲಿಗಾದರೂ ಯಾಕೆ ಹೋಗಬೇಕು ಹೇಳಿ
ಕಲಿಯುತ್ತಿವೆಯಲ್ಲ ಮಶೀನ್ ದಿನಬೆಳಗಾದರೆ
ಡ್ರೈವಿಂಗ್ ಕೂಡಾ ಈಗ ಬೇಕಾಗಿಲ್ಲ, ಏಕೆಂದರೆ
ಬೇಕಿದ್ದರೆ ಹೋಗುತ್ತೇವೆ ಟ್ಯಾಕ್ಸಿ ಸರ್ವಿಸಿಗೆ ಮೊರೆ
ಹೊಲದಲ್ಲಿ ಕೆಲಸ ಮಾಡೆವು, ಏಕೆಂದರೆ
ಇವೆಯಲ್ಲ ರೋಬಾಟ್ ಮಾಡುತ್ತವೆ ಹೇಳಿದರೆ
ಗುಡಿಸಿ ಸಾರಿಸುವ ಕೆಲಸ ಕಲಿತಿಲ್ಲ ಏಕೆಂದರೆ
ಯಾಕೆ ಬೇಕು ಅವೆಲ್ಲ, ರೋಬಾಟ್ ಇರಬೇಕಾದರೆ
ಎಲ್ಲವೂ ಬರುತ್ತದೆ ಬ್ರೋ ಆರ್ಡರ್ ಮಾಡಿದರೆ
ಆರ್ಡರ್ ಮಾಡಲೂ ಆಪ್ ಇದೆಯಂತೆ ಬೇರೆ
ಕೆಲಸವೇ ಕೈಲಾಸ ಎಂದೆಲ್ಲ ಹಲುಬಲು ನಾವು ಮುದುಕರೇ
ದುಡಿವ ರೋಬಾಟ್ ಹೋಗಲಿ ಕೈಲಾಸಕ್ಕೆ ಬೇಕಾದರೆ
ಸುಮ್ಮನೆ ಯಾಕೆ ಚಿಂತಿಸುತ್ತೀರಿ ಮಹಾಜನರೇ
ರಾಜೀನಾಮೆ ಕೇಳಿದರಾಯ್ತು ಇವೆಲ್ಲ ಸಿಗದಿದ್ದರೆ
ಇವರಲ್ಲದಿದ್ದರೆ ಅವರು, ಅವರಲ್ಲದಿದ್ದರೆ ಇನ್ನೊಬ್ಬರು
ಯಾರಾದರೂ ಫ್ರೀ ಬೀ ಕೊಟ್ಟೇ ಕೊಡುತ್ತಾರೆ
ಪ್ರತಿಭಟಿಸಲು ಬೀದಿಗೆ ಇಳಿಯಬೇಕಿಲ್ಲ ಯಾರೂ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ