ಹೂವು ಕೊಳ್ಳುವಾಗ



ಮೂಲ: ಏಮಿ ಗ್ರಿಮ್ 
ಕನ್ನಡ ಅನುವಾದ: ಸಿ ಪಿ ರವಿಕುಮಾರ್ 



ಪ್ರಿನ್ಸ್ ರಸ್ತೆಯಲ್ಲಿರುವ ಹೂವಿನ ಅಂಗಡಿಯಲ್ಲಿ
ಕೆಲಸ ಮಾಡುವ ಮಹಿಳೆ ಇದ್ದಾಳಲ್ಲ
ಅವಳು ಕೊರಿಯಾದಲ್ಲಿ ಸೂಲಗಿತ್ತಿಯೇ ಆಗಿದ್ದಿರಬೇಕು.

ಗುಲಾಬಿಗಳನ್ನು ಟಿಶ್ಯೂ ಕಾಗದದಲ್ಲಿ
ಜಾಗರೂಕತೆಯಿಂದ ಸುತ್ತುವಾಗ
ಎಷ್ಟು ಮಮತೆಯಿಂದ ನೋಡುತ್ತಾಳೆ
ಅವುಗಳ ಕಡೆಗೆ ಮತ್ತು
ಇಡುತ್ತಾಳೆ ನಮ್ಮ ಕೈಯಲ್ಲಿ ಹಗುರವಾಗಿ.

ಎಷ್ಟೆಂದರೆ ಕೊಡುತ್ತಿರುವಳೇನೋ
ನಮ್ಮ ಕೈಗೆ ನವಜಾತ ಶಿಶುವನ್ನು
ಅಥವಾ ಒಂದು ಗ್ರೆನೇಡನ್ನು ಎಂಬಂತೆ. ನನಗೆ

ತಾಯಾಗುವುದು ಬೇಡ. ಆದರೂ
ನನ್ನ ಎಡಗೈ ಕಂಕುಳಿಗೆ ಮಗುವನ್ನು ಎತ್ತಿಕೊಳ್ಳುವುದು 
ಸಹಜ ಕ್ರಿಯೆ. ನಡೆದು ಬರುವಾಗ ಒಬ್ಬ
ನಿರ್ಗತಿಕ ನನ್ನ ಕಡೆ ನೋಡಿ ಹೇಳಿದ್ದು 
ಮಗುವಿನ ಮುಖ ನಿಮ್ಮಂತೆಯೇ ಇದೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ