ರೀಲ್ ಆರೋಗ್ಯ ಭಾಗ್ಯ

 
ಸಿ ಪಿ ರವಿಕುಮಾರ್ 




ಎಲುಬು ಗಟ್ಟಿಯಾಗಿರಲು ಪ್ರತಿದಿನ ತಿನ್ನಿ ಒಂದು ಸ್ಪೂನು
ಎನ್ನುವವರು ಹೇಳಲಿ ಹೇಗೆ ತಿನ್ನಲಿ ಸ್ಪೂನನ್ನು ನಾನು

ವೆಜಿಟೇರಿಯನ್ ಡಯಟ್ಟಿನಲ್ಲಿ ಇಲ್ಲವಂತೆ ಸಾಕಷ್ಟು ಪ್ರೋಟೀನು 
ಮತ್ತು ಇದೆಯಂತೆ ಅದರಲ್ಲಿ ಧಂಡಿಯಾಗಿ ಪ್ರೋಟೀನು
  
ಕುಂಬಳಕಾಯಿ ಬೀಜ ಬಾದಾಮಿ ಹುರಿಗಡಲೆಯನ್ನು
ಕುಟ್ಟಿ ಪುಡಿಮಾಡಿ ತಿನ್ನಬೇಕಂತೆ ಎರಡೆರಡು ಸ್ಪೂನು
     
ಕೂದಲು ಗಟ್ಟಿಯಾಗಿರಲು ದಿನಾ ಬೆಳಗ್ಗೆ ರಾತ್ರಿ
ಏನೋ ಸೇವಿಸಬೇಕಂತಲ್ಲ ಮರೆತುಹೋಯಿತು ಏನು

ಮರೆವು ಹೆಚ್ಚಾದರೆ ಅದಕ್ಕೂ ಇದೆ ಒಂದು ಸ್ಪೂನು
ಎಂಥದ್ದೋ ಪುಡಿ, ತಿನ್ನಬೇಕು ಜೊತೆಗೆ ಜೇನು

ಕೂದಲು ಇರುವುದೇ ಒಂದೆರಡು ಬೆಳ್ಳಗಾಗಿವೆ ಅವೂನೂ 
ಮ್ಯಾಜಿಕ್ ತೈಲದ ಭರವಸೆ ಮಾತ್ರ ತೊರೆದಿಲ್ಲ ಇನ್ನೂ

ಮುಂದೆ ಬಂದರೆ ಹೊಟ್ಟೆ ಪಾಪ ಆದರೆ ತಪ್ಪೇನು
ಮುಂದೆ ಬರುವ ಇಚ್ಛೆ ನಿಮಗಿಲ್ಲವೇನು?

ಪ್ರತಿಯೊಂದು ಅಂಗಾಂಗಕ್ಕೂ ಒಂದೊಂದು ಸ್ಪೂನು 
ತಿನ್ನುವುದು ಯಾವಾಗ ಲಂಚ್ ಮತ್ತು ಡಿನ್ನರ್ ನಾನು

  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ