ಮಗುವಿನ ಅಪಹರಣ
ಮೂಲ: ಡಬ್ಲ್ಯೂ ಬಿ ಯೇಟ್ಸ್
ಕನ್ನಡಕ್ಕೆ: ಸಿ ಪಿ ರವಿಕುಮಾರ್
ಕನ್ನಡಕ್ಕೆ: ಸಿ ಪಿ ರವಿಕುಮಾರ್
ಬಂಡೆಗಲ್ಲುಗಳ ಮಲೆನಾಡು ಎಲ್ಲಿ ಅದ್ದುವುದೋ
ಬಿದಿರುಮೆಳೆ ಕಾಡನ್ನು ಸರೋವರದಲ್ಲಿ
ನಳನಳಿಸುವ ಎಲೆಮರೆಯ ದ್ವೀಪವಿದೆ ಅಲ್ಲೊಂದು.
ಅಲ್ಲಿ ಕೊಕ್ಕರೆ ಹಿಂಡು ರೆಕ್ಕೆ ಬಡಿಯುತ್ತ
ಎಬ್ಬಿಸುತ್ತದೆ ತೂಕಡಿಸುವ ನೀರಿಲಿಗಳನ್ನು.
ಬಚ್ಚಿಟ್ಟಿದ್ದೇವೆ ನಾವಲ್ಲಿ ದೊಡ್ಡ ಹೂಜಿಗಳಲ್ಲಿ
ಹಿಪ್ಪುನೇರಳೆ ಹಣ್ಣು, ಸಿಹಿ ಎಲಚಿ, ದ್ರಾಕ್ಷಿ,
ಮತ್ತು ಕದ್ದು ಶೇಖರಿಸಿಟ್ಟ ಅಚ್ಚಗೆಂಪು ದಾಳಿಂಬೆ.
ಬಂದುಬಿಡು ನಮ್ಮೊಂದಿಗೆ ಓ ಮಾನವ ಶಿಶು!
ನಿರ್ಭಿಡೆಯ ವನರಾಜಿಗೆ, ಹುಚ್ಚುನಡೆಯ ವಾರಾಶಿಗೆ,
ಕರೆದೊಯ್ಯುವಳು ಯಕ್ಷಿ ನಿನ್ನ ಕೈ ಹಿಡಿದು!
ನೀನರಿಯೆ ಈ ಜಗದೊಳಗೆ ನಿನ್ನ ಊಹೆಗೂ ಮೀರಿ
ತುಂಬಿಕೊಂಡಿದೆ ಗೋಳು ಕಣ್ಣೀರು ಎಂದು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ