ಚೈನೀಸ್ ಟೀ ಕುಡಿಯುತ್ತಾ

 

ಹಿಂದಿ ಮೂಲ: ಅಜ್ಞೇಯ
ಕನ್ನಡ ಅನುವಾದ: ಸಿ ಪಿ ರವಿಕುಮಾರ್


ಚಹಾ ಕುಡಿಯುತ್ತಾ
ನಾನು ಅಪ್ಪನ ಬಗ್ಗೆ ಯೋಚಿಸುತ್ತಿದ್ದೇನೆ.

ನೀವು ಎಂದಾದರೂ 
ಚಹಾ ಕುಡಿಯುವಾಗ
ನಿಮ್ಮ ತಂದೆಯ ಬಗ್ಗೆ ಯೋಚಿಸಿದ್ದೀರಾ?

ಒಳ್ಳೆಯದಲ್ಲ
ಅಪ್ಪಂದಿರ ಬಗ್ಗೆ ಯೋಚಿಸುವುದು.
ನಮ್ಮ ಕಲಾಯಿ ಇಳಿದು ಹೋಗುತ್ತದೆ.

ನಾವು ಬೇರೆ ಏನಾದರೂ ಆಗಬಹುದಿತ್ತು.
ಈ ಆಲೋಚನೆಯ ತೊಂದರೆ ಏನೆಂದರೆ
ನಾವು ಬೇರೇನಾದರೂ ಆಗಿದ್ದರೆ 
ಬಹುಶಃ ನಮ್ಮ ತಂದೆಗೆ ಇನ್ನಷ್ಟು ಹತ್ತಿರವಾಗುತ್ತಿದ್ದೆವು
ಇನ್ನಷ್ಟು ಅಪ್ಪನಂತೆ ಆಗುತ್ತಿದ್ದೆವು 
ಎಂಬ ಸಾಕ್ಷಾತ್ಕಾರವಾಗುವುದು.

ಅಪ್ಪನಂತೆ ಆಗಲು ಎಷ್ಟು 
ದೂರ ಹೋಗಬೇಕಾಗುತ್ತದೆ ಅಪ್ಪನಿಂದ.

ಅಪ್ಪನಿಗೂ ಬೆಳಗ್ಗೆ
ಚಹಾ ಕುಡಿಯುವ ಅಭ್ಯಾಸವಿತ್ತು.
ಅವರೂ ಯೋಚಿಸುತ್ತಿದ್ದರೆ 
ತಮ್ಮ ಅಪ್ಪನ ಕುರಿತು?
ಹತ್ತಿರವಾಗಿಯೋ ಅಥವಾ ದೂರವಾಗಿಯೋ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ