ಮಳೆ

ಮೂಲ : ರೇಮಂಡ್ ಕಾರ್ವರ್

ಅನುವಾದ: ಸಿ ಪಿ ರವಿಕುಮಾರ್ 



ಇವತ್ತು ಎದ್ದಾಗ ಯಾಕೋ
ಇಡೀ ದಿವಸ ಮಲಗಿ
ಹಾಸಿಗೆಯಲ್ಲೇ ಓದುವ ಖಯಾಲಿ.

ಒಂದು ನಿಮಿಷ ಹೋರಾಡಿದೆ 
ಅದಮ್ಯ ಆಸೆಯ ಜೊತೆಗೆ.

ನಂತರ ಕಿಟಕಿಯಿಂದ ಹೊರಗೆ ಇಣುಕಿ
ಸುರಿಯುವ ಮಳೆಯನ್ನು ನೋಡಿ
ಸೋಲೊಪ್ಪಿಕೊಂಡೆ. ಇಡೀ ದಿವಸ
ಬೆಳಗಿನ ಮಳೆಯ ಸುಪರ್ದಿಗೆ 
ನನ್ನನ್ನು ಒಪ್ಪಿಸಿಕೊಂಡೆ.

ನಾನು ಜೀವನವನ್ನು ಮತ್ತೊಮ್ಮೆ ಬದುಕಿದರೆ
ಇಂಥ ತಪ್ಪನ್ನು ಮಾಡುವೆನೇ ಪುನಃ?
ಅವಕಾಶ ಸಿಕ್ಕಿದರೆ ಖಂಡಿತಾ ಖಂಡಿತ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ