ತಂತಿ (ಅನುವಾದಿತ ಕವಿತೆ)

ಕೆನಡಾ ಗಡಿಯಲ್ಲೊಂದು ಅ-ರಾಷ್ಟ್ರೀಯ ಸ್ಮಾರಕ 

ಮೂಲ: ವಿಲಿಯಮ್ ಸ್ಟಾಫರ್ಡ್ (ಅಮೆರಿಕಾ ಸಂಸ್ಥಾನ) 

ಕನ್ನಡಕ್ಕೆ: ಸಿ. ಪಿ. ರವಿಕುಮಾರ್ 




ಇದು ಯಾವ ಯುದ್ಧವೂ ನಡೆಯದ ಮೈದಾನ,
ಯಾವ ಅನಾಮಧೇಯ ಸೈನಿಕನೂ ಇಲ್ಲಿ ಬಿಡಲಿಲ್ಲ ಪ್ರಾಣ,
ಇಲ್ಲಿ ಕೈ ಹಿಡಿದವು ಎರಡೂ ಕಡೆ ಬೆಳೆದ ಹುಲ್ಲುಗರಿಕೆ,
ಯಾವುದೇ ಸ್ಮಾರಕವನ್ನೂ ಕಟ್ಟಿಲ್ಲ ಅದಕ್ಕೆ,
ಇಲ್ಲಿ ಕಾಣುವ ಏಕಮಾತ್ರ ವೀರ ಚಿಹ್ನೆ ಮುಕ್ತಗಗನ.  

ಹಕ್ಕಿಗಳು ಹಾರಾಡುತ್ತವೆ ನಿಶ್ಶಬ್ದವಾಗಿ ಇಲ್ಲಿ 
ರೆಕ್ಕೆ ಬಿಚ್ಚಿ ಮುಕ್ತವಾಗಿ ತೆರೆದ ಬಾನಿನಲ್ಲಿ,
ಯಾರೊಬ್ಬರೂ ಸಾಯಲಿಲ್ಲ ಈ ಬಯಲಿನ ಮೇಲೆ,
ಎಷ್ಟು ಪಳಗಿದೆ ಬಯಲುಗಾಳಿ, ನಿರ್ಲಕ್ಷ್ಯದಿಂದೆಷ್ಟು ಪವಿತ್ರವಾಗಿದೆ ಬಯಲೆಂದರೆ,
ಇದರ ಹೆಸರನ್ನು ಮರೆಯುವುದೇ ಜನರು ಕೊಟ್ಟ ಬಳುವಳಿ. 


At the Un-National Monument Along the Canadian Border


Birds fly here without any sound,
unfolding their wings across the open.
No people killed — or were killed — on this ground
hallowed by neglect and an air so tame
that people celebrate it by forgetting its name.
—William E. Stafford

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ