ರೊಟ್ಟಿ ಮತ್ತು ಸ್ವಾತಂತ್ರ್ಯ
ರಾಮಧಾರಿ ಸಿಂಗ್ ದಿನಕರ್ ಹಿಂದಿಯ ಬಹಳ ಮುಖ್ಯ ಕವಿ. ಸ್ವಾತಂತ್ರ್ಯ ಹೋರಾಟದಲ್ಲಿ ಸ್ವತಃ ಪಾಲ್ಗೊಂಡವರು. ಸ್ವಾತ್ಯಂತ್ರ್ಯ ಬಂದ ಹೊಸ್ತಿಲಲ್ಲಿ ಇವರು ಬರೆದ ಕವಿತೆ ಇಂದಿಗೂ ಪ್ರಸ್ತುತವಾಗಿದೆ. ಸ್ವಾತಂತ್ರ್ಯದಿನದಂದು ನಾವು ಕಲಿಯಬೇಕಾದ ಮುಖ್ಯಪಾಠವನ್ನು ಅವರು ಎಷ್ಟು ಚೆನ್ನಾಗಿ ಕವಿತೆಯ ರೂಪದಲ್ಲಿ ಹೇಳಿದ್ದಾರೆ, ನೋಡಿ. "ಹಸಿವು ತಾಳಿಕೋ, ನಿನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಡ" ಎಂದು ಹೇಳುವವರು ಈಗ ಇಲ್ಲವೇ ಇಲ್ಲ. ನಾನಾ ಬಗೆಯ ಹಸಿವುಗಳಿಗೆ ಶರಣಾಗುತ್ತಿರುವ ಇಂದಿನ ಸಮಾಜವನ್ನು ಈ ಕವಿತೆ ಎಚ್ಚರಿಸುತ್ತದೆ.
ಮೂಲ ಹಿಂದಿ ಕವಿತೆ : ರಾಮಧಾರಿ ಸಿಂಗ್ ದಿನಕರ್
ಕನ್ನಡ ಅನುವಾದ : ಸಿ ಪಿ ರವಿಕುಮಾರ್
ಸ್ವಾತಂತ್ರ್ಯವೇನೋ ಸಿಕ್ಕಿತು, ಆದರೆ ಸ್ಥಿರವಾಗಿರುವುದೇ ಈ ಗೌರವ?
ಮಾರಿ ತಿಂದುಬಿಡುವಿಯೋ ಹೇಗೆ, ಹಸಿವೆಯಲ್ಲಿ ಸಾಯುತ್ತಿರುವ
ಭಾರತೀಯ? ಸ್ವಾತಂತ್ರ್ಯವು ರೊಟ್ಟಿಯಲ್ಲ, ಇವೆರಡೂ ಶತ್ರುಗಳೂ ಅಲ್ಲ,
ಹಸಿವೇ ದೊಡ್ಡದಾದರೆ ಮಾತ್ರ ಸ್ವಾತ್ರಂತ್ರ್ಯಕ್ಕೆ ಉಳಿಗಾಲವಿಲ್ಲ
ಸ್ವಾತ್ರಂತ್ರ್ಯ ದ್ರೋಹಿಗಳು ಎದ್ದು ನಿಲ್ಲುತ್ತಿದ್ದಾರೆ ನಾಲ್ಕೂ ಕಡೆ
ರೊಟ್ಟಿ ತೋರಿಸಿ ಪಶುಗಳನ್ನು ಅಟ್ಟಿಕೊಂಡೊಯ್ಯುವುದು ಇವರ ನಡೆ.
ಎಷ್ಟು ದಿನ ಸಹಿಸುವನು ಹಸಿದು ಕಂಗಾಲಾದವನು ಇವರ ಮಾಯೆ?
ಹೊಟ್ಟೆಯ ಬೆಂಕಿಗೆ ಸಿಕ್ಕಿದ ಮಾನವ ಸುಟ್ಟುಹೋಗದೇ ಇರುವನೆ?
ಕೊಡಬಲ್ಲೆಯಾ ಬಲಿದಾನ? ಸಹಿಸಿಕೊಳ್ಳುವೆಯೇನು ಹಸಿವೆಯ ಪೆಟ್ಟು?
ಹುಲ್ಲಿನರೊಟ್ಟಿ ಕಡಿದು ರಾಣಾಪ್ರತಾಪನಂತೆ ದಾಟಬಲ್ಲೆಯಾ ವಿಪತ್ತು?
ಪಡೆದುಕೊಂಡಷ್ಟೇ ದೊಡ್ಡದು ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವುದೂ.
ಕೊಡಬೇಕು ಬಲಿದಾನ ಮತ್ತೆ ಮತ್ತೆ ಇದಕ್ಕಾಗಿ, ಎದ್ದೇಳು, ಸಿದ್ಧನಾಗು!
(1)
ಪ್ರತ್ಯುತ್ತರಅಳಿಸಿआजादी तो मिल गई, मगर, यह गौरव कहाँ जुगाएगा ?
मरभुखे ! इसे घबराहट में तू बेच न तो खा जाएगा ?
आजादी रोटी नहीं, मगर, दोनों में कोई वैर नहीं,
पर कहीं भूख बेताब हुई तो आजादी की खैर नहीं।
(2)
हो रहे खड़े आजादी को हर ओर दगा देनेवाले,
पशुओं को रोटी दिखा उन्हें फिर साथ लगा लेनेवाले।
इनके जादू का जोर भला कब तक बुभुक्षु सह सकता है ?
है कौन, पेट की ज्वाला में पड़कर मनुष्य रह सकता है ?
(3)
झेलेगा यह बलिदान ? भूख की घनी चोट सह पाएगा ?
आ पड़ी विपद तो क्या प्रताप-सा घास चबा रह पाएगा ?
है बड़ी बात आजादी का पाना ही नहीं, जुगाना भी,
बलि एक बार ही नहीं, उसे पड़ता फिर-फिर दुहराना भी।
Poem by Ramdhari Singh Dinakar
ಅಳಿಸಿ