ಖಗೋಳಶಾಸ್ತ್ರ ಮತ್ತು ತಾರೆ

ಮೂಲ: ವಾಲ್ಟ್ ವ್ಹಿಟ್ಮನ್

ಕನ್ನಡ ಅನುವಾದ: ಸಿ. ಪಿ. ರವಿಕುಮಾರ್



ಖಗೋಳಶಾಸ್ತ್ರ ಪಂಡಿತನೊಬ್ಬನ ಉದ್ದುದ್ದ ವಿವರಣೆ ಕೇಳುತ್ತಾ 

ಭಾಗಾಕಾರ ಗುಣಾಕಾರಗಳೊಂದಿಗೆ ಪುರಾವೆಗಳು ಮೈದಾಳುತ್ತಾ 

ಅಗೋಚರ ಆಕಾಶಕಾಯಗಳನ್ನು ಮಾಪನ ಮಾಡಿ

ಯುಗಾಂತರಗಳ ಆಚೆಗೂ ಇಣುಕಿ ನೋಡಿ

ಆಗಾಗ ಭಾಷಣ ಸಭಾಗೃಹದಲ್ಲಿದ್ದ ಶ್ರೋತೃಗಣ 

ಮುಗಿಲುಮುಟ್ಟುವ ಹಾಗೆ ಮಾಡುತ್ತಿತ್ತು ಕರತಾಡನ.

ನನಗೆ ಸಾಕಾಗಿಹೋಯಿತು ಅದೇಕೋ; ಮೇಲೆದ್ದೆ,

ಜನರ ನಡುವೆ ನುಸುಳಿ ಹೇಗೋ ಹೊರಗೆ ಬಂದೆ.

ತಂಗಾಳಿಗೆ ಮೈಯೊಡ್ಡಿ ನಿಂತೆ ಒಂದಷ್ಟು ಹೊತ್ತು,

ಹಾಗೇ ನಡೆದೆ ಇಲ್ಲದೆ ಯಾವ ಗುರಿಗೊತ್ತು.

ಅಗಾಧ ಆಕಾಶದ ಕಡೆಗೆ ಬೀರುತ್ತ ದೃಷ್ಟಿ,

ಸಾಗಿದೆ ಕೇಳುತ್ತಾ ತಾರೆಗಳ ಮೌನಗಾನಗೋಷ್ಠಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)