ಪೋಸ್ಟ್‌ಗಳು

ಏಪ್ರಿಲ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚೈನಾ ಬಿತ್ತುತ್ತಿದೆಯಂತೆ ಚಂದ್ರನ ಮೇಲೆ ಆಲೂ (ಗಜಲ್)

ಇಮೇಜ್
ಸಿ. ಪಿ. ರವಿಕುಮಾರ್  ಚೈನಾ ಬಿತ್ತುತ್ತಿದೆಯಂತೆ ಚಂದ್ರನ ಮೇಲೆ ಆಲೂ ಮುಂದೊಮ್ಮೆ ಕರೆದೀತು ಚಂದ್ರಿಕೆಯು ಹಾಲು ಟ್ರಾಕ್ಟರ್ ಓಡಿಸಿ ಚಂದ್ರವದನದ ಮೇಲೆಲ್ಲಾ ಹದಮಾಡಿ ಬಿತ್ತಬಹುದು ನೆಲಗಡಲೆ ಕಾಳು ಈಗಾಗಲೇ ಅಲ್ಲಿ ನೆಲೆಸಿರುವ ಉಡುಪಿ ಭಟ್ಟರು ವಿಸ್ತರಿಸಬಹುದು ಇನ್ನಷ್ಟು ಇಡ್ಲಿವಡೆ ಹೋಟೆಲು ಬೆಳೆಯಬಹುದು ನಾಳೆ ಇಂದುವಿನ ಮೇಲೆ ಸೂಜಿಮಲ್ಲಿಗೆ ದುಂಡುಮಲ್ಲಿಗೆಯ ಸಾಲು ದ್ರಾಕ್ಷಿಬಳ್ಳಿಯು ಹಬ್ಬಿ ಹಳದಿಚಂದ್ರನ ಮೇಲೆ ತೂಗಬಹುದು ಬಾನಲ್ಲಿ ರಸಭರಿತ ಗೊಂಚಲು ದ್ರಾಕ್ಷಾರಸವನ್ನು ತುಂಬಿತುಂಬಿ ಹೂಜಿಗಳಲ್ಲಿ ಸಾಕೀಗಳು ನಿಂತಾರು ಚಂದಿರನ ಮೇಲೂ ಮಧುಶಾಲೆ, ಸಾಕೀ, ಇತ್ಯಾದಿ ಕನವರಿಸುವ ಶಾಯರರು ಹೋಗಿ ನಿಂತಾರು ಹಿಡಿದು ತಳವಿರದ ಬಟ್ಟಲು ಚಂದ್ರಮುಖಿ ಎಂದೆಲ್ಲಾ ಕವನಿಸುವ ಪ್ರೇಮಕವಿ  ಉಪಮೆಯಿಲ್ಲದೆ ಕಾಣುವನೆ ಪ್ರೇಮದಲಿ ಸೋಲು?

ದೇಶಭಕ್ತ ರತ್ನ

ಇಮೇಜ್
ಮೂರನೇ ಕ್ವಾರ್ಟರ್‍‍ವರೆಗೆ  ದೇಶ ಸಾಧಿಸುವುದು ಆರ್ಥಿಕ ಪ್ರಗತಿ ಹಾಗೆ ಹೇಳಿದ್ದು  ಸ್ವಯಂ ರಿಸರ್ವ್ ಬ್ಯಾಂಕ್ ಅಧಿಪತಿ ಹೀಗಾಗಿ ರತ್ನ ಕೊಂಡು ತಂದಿದ್ದಾನೆ ಒಂದಲ್ಲ ಮೂರು ಒಂದಾಯಿತು ಎರಡಾಯಿತು ಈಗ ಮೂರನೇ ಕ್ವಾರ್ಟರ್ರು. ಮರುದಿವಸ ಮಧ್ಯಾಹ್ನ ಎಚ್ಚರವಾದಾಗ ರತ್ನ ಕಷ್ಟಪಟ್ಟು ಕಣ್ಬಿಡಲು ಮಾಡಿದ ಪ್ರಯತ್ನ ಏನೂ ಬದಲಾಗಿಲ್ಲ, ಎಲ್ಲ ಇದೆಯಲ್ಲ ಹಾಗೇ! ಹಾಗೇ ಇದೆ ಗುಡಿಸಲು, ಕೂಗುತ್ತಿದೆ ಕಾಗೆ. ಬೇಸರವಾಗಿ ರತ್ನ ಹೊರಟ ಸಂಜೆ ಮತ್ತೊಮ್ಮೆ ಬಾರಿಗೆ "ಮರಳಿ ಯತ್ನವ ಮಾಡಿದರೆ ಗೆಲುವು ಸಿಕ್ಕೀತು ಒಂದು ಸಾರಿಗೆ."

ಜಲಿಯಾನ್‍‍ವಾಲಾ ಬಾಗ್‍‍ನಲ್ಲಿ ವಸಂತ

ಇಮೇಜ್
ಮೂಲ - ಸುಭದ್ರಾ ಕುಮಾರಿ ಚೌಹಾನ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಕೋಗಿಲೆಯಲ್ಲ, ಕಾಗೆಯು ಕೂಗಿ ಮುರಿಯುತ್ತದೆ ಮೌನ. ಸುತ್ತ ಹಾರಾಡುತ್ತಿರುವುದು ಕಪ್ಪುಭೃಂಗವಲ್ಲ, ನೊಣ. ಮೊಗ್ಗುಗಳು ಅರಳದಂತೆ ಕಚ್ಚಿ ಹಿಡಿದಿವೆ ಮುಳ್ಳು, ಗಿಡ-ಹೂವುಗಳು ಎಲ್ಲ  ಒಣಕಲು-ಒಣಕಲು. ಪರಿಮಳವಿಲ್ಲದ ಪರಾಗವು ಕಲೆಯಂತೆ ಬಿದ್ದಿದೆ - ಅಯ್ಯೋ ಸುಂದರ ಉಪವನವಿಡೀ ರಕ್ತದಲ್ಲಿ ಅದ್ದಿದೆ! ಓ ಋತುರಾಜ ವಸಂತ! ನೀನಿಲ್ಲಿ ಮೆಲ್ಲಮೆಲ್ಲಗೆ ಕಾಲಿಡು. ಶೋಕಸ್ಥಾನವಿದು, ಸದ್ದು ಸ್ವಲ್ಪವೂ ಕೂಡದು. ಬೀಸುವುದಾದರೆ ಗಾಳಿ ಮಂದಮಂದವಾಗಿ ಬೀಸಲಿ  ದುಃಖದ ಆರ್ತಸ್ವರವ ಜೊತೆಗೆ ಕೊಂಡೊಯ್ಯದಿರಲಿ  ಹಾಡುವುದಾದರೆ ಹಾಡಲಿ ಶೋಕರಾಗವನ್ನು ಕೋಗಿಲೆ  ಭ್ರಮರ ಗುಂಜಿಸಲಿ ಶೋಕಕಥೆ-ಕಷ್ಟಕೋಟಲೆ  ತರುವೆಯಾದರೆ ಪುಷ್ಪಗಳ ತಾರದಿರು ಸಿಂಗಾರದ ಹೂವು.    ಗಂಧ ಬೀರಿದರೂ ಮಂದವಾಗಿರಲಿ, ಕಣ್ಣೀರಿನಲಿ ನೆಂದು  ತಂದು ಎರಚದಿರು ಇಲ್ಲಿ ಉಲ್ಲಾಸಭಾವ ಖಂಡಿತ ಪೂಜೆಗೆಷ್ಟು ಬೇಕೋ ಅಷ್ಟು, ಎಲ್ಲವೂ ಹಿತಮಿತ  ಕೋಮಲ ಬಾಲಕರು ಸತ್ತರು ಇಲ್ಲಿ ಗುಂಡು ತಿಂದು  ಚೆಲ್ಲು ಅವರಿಗಾಗಿ ಒಂದಷ್ಟು ಮೊಗ್ಗುಗಳ ತಂದು  ಆಸೆಗಳು ತುಂಬಿದ ಹೃದಯಗಳು ಇಲ್ಲಿ ಬಿದ್ದಿವೆ ಮುರಿದು  ಬಿದ್ದಿವೆ ಅನಾಥಪುಷ್ಪಗಳಂತೆ ದೇಶದ ಲತೆಯನ್ನು ತೊರೆದು  ಅರೆಬಿರಿದ ಒಂದಿಷ್ಟು ಮೊಗ್ಗು ಅವರಿಗಾಗಿ ತಂದು  ಜೊತೆಗೆ  ಸಮರ್ಪಿಸು   ಕಣ್ಣಿನಿಂದ ಜಾರುವ ಬಿಂದು  ವೃದ್ಧರೂ ಅದೆಷ್ಟೋ

ಕುಸುಮಿತ ಸೌರಭದ ಧಗೆ

ಇಮೇಜ್
ಮೂಲ ಹಿಂದಿ ರಚನೆ - ಗುಲ್ಜಾರ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಲತಾ ಮಂಗೇಶ್ಕರ್ ಅವರ ಅದ್ಭುತ ಗಾಯನದಲ್ಲಿ ಅರಳಿದ ಗುಲ್ಜಾರ್ ಅವರ ಪಂಕ್ತಿಗಳನ್ನು ಕನ್ನಡಕ್ಕೆ ಅನುವಾದಿಸುವ ಪ್ರಯತ್ನ. ಖಾಮೋಶಿ ಚಿತ್ರದಲ್ಲಿ ಬಳಸಿಕೊಂಡ ಈ ಕವಿತೆ ಕಥೆಯ ಮುಖ್ಯಪಾತ್ರದ ಮನಸ್ಸಿಗೆ ಹಿಡಿದ ಕನ್ನಡಿ.  ಭಗ್ನಪ್ರೇಮದ ಕಾರಣದಿಂದ ಉಂಟಾದ ಮನೋವಿಕಲ್ಪದಿಂದ ಆಸ್ಪತ್ರೆ ಸೇರಿದ ತರುಣನನ್ನು ಗುಣಪಡಿಸಲು ಒಬ್ಬ ದಾದಿಯನ್ನು ಆಯ್ಕೆ ಮಾಡಲಾಗುತ್ತದೆ. ಅವಳು ಆತನೊಂದಿಗೆ ಪ್ರೀತಿಯನ್ನು ನಟಿಸಬೇಕು. ದೂರದಿಂದಲೇ ಆತನನ್ನು ಪ್ರೀತಿಸಬೇಕು. ಅವನೊಂದಿಗೆ ನಿಜವಾದ ಪ್ರೇಮದ ಭಾವನೆಯನ್ನು ಬೆಳೆಸಿಕೊಳ್ಳಬಾರದು!  ಕಂಡಿತೇ ಕಂಗಳಲ್ಲಿ ಕುಸುಮಿತ ಸೌರಭದ ಧಗೆ? ಸ್ಪರ್ಶಿಸಿ ಸಂಬಂಧವನು ಆರೋಪಿಸುವುದೇಕೆ ? ಬರಿ ಮನವರಿಕೆಗಿದು, ದೂರದಿಂದ ಅನುಭವಿಸು  ಪ್ರೀತಿಯಾಗೇ ಇರಲಿ ಪ್ರೀತಿ, ಏತಕೆ ಹೆಸರು? ಇಲ್ಲ ಪ್ರೀತಿಗೆ ಭಾಷೆ, ಇಲ್ಲ ನಾಲಿಗೆ ಮಾತು, ಆಲಿಸುವ ಮೌನವು ಬಾಯ್ತೆರೆಯದೆ ಮಾತಾಡುವುದು, ಎಂದಿಗೂ ಆರದಿದು, ನಿಲ್ಲದು, ತಂಗದು ಎಲ್ಲೂ, ಬೆಳಕಿನ ಹನಿಯು ಯುಗಾಂತರದಿಂದಲು ಹರಿಯುವುದು  ಮಂದಹಾಸವು ಎಲ್ಲೋ ಅರಳುವುದು ಕಣ್ಣೊಳಗೆ ಮತ್ತು ಹೊಂಬೆಳಕು ಅಗೋ ಮುಚ್ಚಿದ ರೆಪ್ಪೆಯ ಮೇಲೆ, ಬಿರಿಯದ ಅಧರಗಳು, ಅದುರುವ ತುಟಿಗಳ ಮೇಲೆ ಕಂಪಿಸುತ್ತವೆ ಎಷ್ಟೋ ಕಥೆಗಳ ನಿಶ್ಶಬ್ದದಲೆ

ಮೋಡವೇ ಮಾತಾಡು ನನ್ನೊಡನೆ!

ಇಮೇಜ್
ಮೂಲ ಹಿಂದಿ ರಚನೆ - ಹರಿವಂಶರಾಯ್ ಬಚ್ಚನ್  ಕನ್ನಡಕ್ಕೆ - ಸಿ.ಪಿ. ರವಿಕುಮಾರ್  ಮೋಡವೇ ಮಾತಾಡು ನನ್ನೊಡನೆ! ತುಂಬಿದೆ  ಕಗ್ಗತ್ತಲು    ನಿನ್ನೊಳಗೆ ಕಗ್ಗತ್ತಲು  ತುಂಬಿದೆ ನನ್ನೊಳಗೂ ಹೇಗೆ ತುಂಬಿಹುದೋ ನಿನ್ನೊಳು  ನೋವು   ಹಾಗೆ ತುಂಬಿಹುದು  ನೋವು  ನನ್ನೊಳಗೂ  ನಿನ್ನ ಹೃದಯಕೂ  ನನ್ನ ಹೃದಯಕೂ ಆಗದೇ  ಮೇಘವೇ,   ಸಮತುಲನೆ! ಮೋಡವೇ ಮಾತಾಡು ನನ್ನೊಡನೆ! ಅಡಗಿದೆ ಹೇಗೋ ನಿನ್ನೊಳು ಅಗ್ನಿ ಅಡಗಿದೆ ಅಗ್ನಿಯು ನನ್ನೊಳಗೂ ರಾಗರಂಗುಗಳು ನಿನ್ನೊಳು ಹೇಗೋ  ಹಾಗೇ ತುಂಬಿವೆ ನನ್ನೊಳಗೂ  ಇಬ್ಬರೂ  ಹೃದಯದ್ವಾರವ ತೆರೆದು  ಹರಿಸುವ ಮರುಕದ ಧಾರೆಯನೇ! ಮೋಡವೇ, ಮಾತಾಡು ನನ್ನೊಡನೆ! ಗುಣದೊಳಲ್ಪ  ವ್ಯತ್ಯಾಸವು ನನಗೂ  ನಿನಗೂ ಇರುವುದು ಒಂದು  ಉಪ್ಪಾಗಿದೆ ನನ್ನಯ ಕಣ್ಣೀರು  ಮಧುರ ನಿನ್ನ ಪ್ರತಿ ಬಿಂದು  ವ್ಯರ್ಥವು  ನನ್ನೀ ಕಂಬನಿ, ಮೋಡದ  ಹನಿ  ನೀಡುವುದು ಬದುಕನ್ನೇ!  ಮೋಡವೇ, ಮಾತಾಡು ನನ್ನೊಡನೆ!

ರೊಬಾಟ್ ನೋಟ

ಇಮೇಜ್
ರೋಬಾಟ್ ಹೋಗುತ್ತದೆ ನೋಡಿ ಅಂಗಡಿಗೆ ರೋಬಾಟ್ ಮಾಡಿ ಬಡಿಸುತ್ತದೆ ಅಡುಗೆ ಉಡಿಸುತ್ತದೆ   ರೋಬಾಟ್    ಮದುವಣಿಗನ ಉಡುಗೆ ಮುಡಿಸುತ್ತದೆ  ರೋಬಾಟ್    ಹೂ ವಧುವಿನ ಜಡೆಗೆ ರೋಬಾಟ್ ಹೊರುತ್ತದೆ ಸಿಹಿನೀರಿನ ಗಡಿಗೆ ರೋಬಾಟ್ ನಡೆಯುತ್ತದೆ ನಾಟ್ಯದ ನಡಿಗೆ ರೋಬಾಟ್ ರೋಬಾಟ್ ಅಡಿಯಿಂದ ಮುಡಿಗೆ ರೋಬಾಟ್ ಬೇಕಪ್ಪ ಮನುಕುಲ ಮುನ್ನಡೆಗೆ ಎಲ್ಲ ಕೆಲಸವ ಬಿಟ್ಟು ರೋಬಾಟಿನ ಅಡಿಗೆ ತಿನ್ನುತ್ತಾ ಕೂಡೋಣ ಹಪ್ಪಳ ಸಂಡಿಗೆ ಯಾಕೆ ನೋಡುತ್ತಿದೆ ರೋಬಾಟ್ ಈ ಕಡೆಗೆ? ರೋಬಾಟ್ ಕೈಯಲ್ಲಿ ಏತಕ್ಕಿದೆ ಬಡಿಗೆ - ಸಿ. ಪಿ. ರವಿಕುಮಾರ್ 

ನಿನ್ನ ಸಂವೇದನೆ ಪಡೆದು ನಾನೇನು ಮಾಡಲಿ?

ಇಮೇಜ್
ಮೂಲ ಹಿಂದಿ ರಚನೆ - ಹರಿವಂಶರಾಯ್ ಬಚ್ಚನ್  ಕನ್ನಡಕ್ಕೆ - ಸಿ.ಪಿ. ರವಿಕುಮಾರ್  ನಿನ್ನ ಸಂವೇದನೆ ಪಡೆದು ನಾನೇನು ಮಾಡಲಿ ಹೇಳು? ನಾನೇನು ಮಾಡಲಿ? ನೋವಿನಲ್ಲಿದ್ದಾಗಲೆಲ್ಲಾ ನಾನು ಸಂವೇದನೆ ತೋರುವೆ ಕೈ ನೀಡಿ ನಾನೂ ತಿಳಿಸುವೆ ಕೃತಜ್ಞತೆಗಳನ್ನು ಪೂರೈಸುವೆವು ಲೋಕಾರೂಢಿ ಈಚೆಗೇಕೋ ಆಭಾರಿಯಾಗುತ್ತ ಭಾರವಾಗುತ್ತಿದೆ ನನ್ನ ಹೆಗಲು! ನಿನ್ನ ಸಂವೇದನೆ ಪಡೆದು ನಾನೇನು ಮಾಡಲಿ ಹೇಳು? ಏನು ಮಾಡಲಿ? ನನ್ನ ಒಂದಾದರೂ ನಿಟ್ಟುಸಿರು ನಿನ್ನದಾಗಿದ್ದು ಎಂದು? ನಿನ್ನ ಕಣ್ಣುಗಳಿಂದ ಉದುರುವುದೇ ನನ್ನ ಕಂಬನಿಯ ಬಿಂದು? ಎಷ್ಟುದಿನ ಬಚ್ಚಿಟ್ಟೀತು ಸತ್ಯ, ಮಾತುಗಳ ಬಾಗಿಲು! ನಿನ್ನ ಸಂವೇದನೆ ಪಡೆದು ನಾನೇನು ಮಾಡಲಿ ಹೇಳು! ನಾನೇನು ಮಾಡಲಿ? ತನ್ನ ದುಃಖ ಪರರಿಗೆ ಕೊಡಬಲ್ಲವರಾರು? ಪರರ ದುಃಖ ತಮ್ಮದೆಂದೇ ಯಾರು ಸ್ವೀಕರಿಸುವರು? ಎಷ್ಟುದಿನ ಈ ವಂಚನೆಯ ವ್ಯಾಪಾರ ಮಾಡಿಕೊಳ್ಳುವೆವು ಅದಲು ಬದಲು? ನಿನ್ನ ಸಂವೇದನೆ ಪಡೆದು ನಾನೇನು ಮಾಡಲಿ ಹೇಳು? ನಾನೇನು ಮಾಡಲಿ? ಒಪ್ಪಿಕೊಳ್ಳೋಣವೇ, ಈ ಪಥದಲ್ಲಿ ಎಲ್ಲರೂ ಒಂಟಿ ನಡೆದರೂ ಅಕ್ಕಪಕ್ಕ. ಅವರವರ ನೋವು ಅವರವರ ಬುತ್ತಿ, ಹಂಚಲಾರದು ಪರಸ್ಪರ ಸುಖದುಃಖ. ಪರರ ವೇದನೆಗೆ ಸಂವೇದನೆ ಸೂಚಿಸುವ ವ್ಯಕ್ತಿ ತನ್ನದೇ ವೇದನೆಯಿಂದ ಪಡೆಯಬಯಸುವನು ಮುಕ್ತಿ ನೀ ದುಃಖಿಯೇ? ಇಗೋ ನಾ ಸುಖಿ! ಅಭಿಶಪ್ತ ವಿಶ್ವದ್ದಿದುವೆ ಅಳಲು! ನಿನ್ನ ಸಂವೇದನೆ ಪಡೆದು ನಾನೇನು ಮಾಡಲಿ ಹೇಳು? ನಾನೇನು ಮಾಡಲಿ?

ಸುಮ್ಮನಿರುವುದು ಹೇಗೆ?

ಇಮೇಜ್
ಮಿತ್ರರೊಬ್ಬರು ಹೀಗೇ ಫೇಸ್ ಬುಕ್ ಮೇಲೆ  ಕಾಲೆಳೆಯಲು ಕೇಳಿದರು -  ಸುಮ್ಮನಿರುವುದು ಹೇಗೆ? ಉತ್ತರಗಳು ಬಂದವು ಎಲ್ಲಾ ದಿಕ್ಕುಗಳಿಂದ ದಿಗಂತಗಳು ಮಾರ್ದನಿಸುವ ಹಾಗೆ. ನಕ್ಕರು ಕೆಲವರು ಜೋರಾಗಿ,  ಹಾಕಿದರು ಜಾಣ ಕಾಮೆಂಟು ಗಂಭೀರ ಉತ್ತರಗಳೂ ಬಂದವು ಎಲ್ಲೋ ಒಂದು ಪರ್ಸೆಂಟು ಇಷ್ಟೊಂದು ಸಲಹೆ ಬಂದದ್ದು ಕಂಡಾಗ ಸುಮ್ಮನಿರುವುದು ಹೇಗೆಂಬ ಪ್ರಶ್ನೆಗೆ ಮಿತ್ರರು ಹುರಿದುಂಬಿ ಕೇಳಿದರು, ಬರುವಿರಾ ಕೆಲಸ ಮಾಡೋಣ ಒಟ್ಟಿಗೆ? ಕನ್ನಡದಲ್ಲಿದೆ ಮಾಡುವುದು ಸಾಕಷ್ಟು ಕಟ್ಟಬೇಕಾಗಿದೆ ಬಹಳ  ವಿಕಿಪೀಡಿಯ, ವಿಜ್ಞಾನ, ತಂತ್ರಾಂಶ, ಇತ್ಯಾದಿ ನೂರೆಂಟು ಕೋಟಿ ವಿಪುಲ. ಅಬ್ಬ! ಏನಾಯಿತೋ ಸುಮ್ಮನಿದ್ದರು ಎಲ್ಲರೂ ಎಲ್ಲ ದಿಕ್ಕುಗಳಲ್ಲೂ ಮೌನ ಬೃಹದಾಕಾರ. ಸುಮ್ಮನಿರುವುದು ಹೇಗೆಂಬ ಪ್ರಶ್ನೆಗೆ ಮಿತ್ರರಿಗೆ ಈಗ ಸಿಕ್ಕಿಬಿಟ್ಟಿದೆ ನಿಜವಾದ ಪರಿಹಾರ. - ಸಿ.ಪಿ. ರವಿಕುಮಾರ್  (೨೦೧೮)

ನ್ಯಾಮ್ ಎಂಬ ಮಂತ್ರ

ಇಮೇಜ್
ನಮ್ಮಲ್ಲಿ ನಡೆದುಕೊಂಡೇ ಬಂದ ಪರಂಪರೆ 'ನ್ಯಾಮ್' ಓ ನಾನ್ ಅಲೈನ್ಡ್ ಮೂವ್ಮೆಂಟ್, ನಿನಗೆ ನವಕೋಟಿಪ್ರಣಾಮ್ ಒಬ್ಬರು ಉತ್ತರದತ್ತ ಎಳೆಯುತ್ತೇವೆ ಇನ್ನೊಬ್ಬರು ದಕ್ಷಿಣದತ್ತ ಮೂಡಣದ ಕಡೆ ಒಬ್ಬರಿಗೆ ಮತ್ತೊಬ್ಬರಿಗೆ ಪಡುವಣದ ಕಡೆ ಚಿತ್ತ ಬಲಗಡೆಗೆ ರಥವನ್ನು ಎಳೆದೊವೈಯುವಾಸೆ ಕೆಲವರಿಗೆ ಇನ್ನು ಕೆಲವರ ಹಠ, ಬೇಡ ಹೋಗೋಣ ಎಡಗಡೆಗೆ ಕೊನೆಗೆ ತಳ್ಳುತ್ತೇವೆ ರಥ ತೋಚಿದ ದಿಕ್ಕಿನಲ್ಲಿ ದಮ್ ಲಗಾಕೆ ಇನ್ನೆಲ್ಲೋ ಸಮವಿರುದ್ಧ ಬಲ ಹಾಕುತ್ತಿರುವುದು ಯಾರು, ಯಾಕೆ? ಆಗಿಬಿಟ್ಟಿದೆಯಲ್ಲ ನಮ್ಮ ಬಲಾಬಲವು ಜೀರೋ ಸಮ್ ಗೇಮ್ ನಮ್ಮಲ್ಲಿ ಲಾಗಾಯ್ತಿನಿಂದಲೂ ಪ್ರಚಲಿತವಿತ್ತು "ನ್ಯಾಮ್" ಇಷ್ಟೆಲ್ಲಾ ಬಲಗಳ ನಡುವೆಯೂ ಮುಂದೆ ಹೋಗುತ್ತಿದ್ದರೆ ರಥ ಯಾರು ನೂಕುತ್ತಿದ್ದಾರೋ ನಮ್ಮ ಅರಿವಿಲ್ಲದೆ ಸತತ! ನಾವು ಹಾಗೇ, ನಮಗೆ ನ್ಯಾಮ್ ಅಂದರೆ ಒಲವು ಅಲೈನ್ ಆಗದೆ ಯಾರೋ ತಳ್ಳಿದೆಡೆಗೆ ಸಾಗುವೆವು!

ಕಿಂಟ್ಸುಕುರೋಯ್

ಇಮೇಜ್
ಜಪಾನ್ ದೇಶದಲ್ಲಿ ಜಾರಿ ಮುರಿದಾಗ ಪಿಂಗಾಣಿ ಬಟ್ಟಲು ನಾಜೂಕಾಗಿ ಜೋಡಿಸಿ ಒಂದೊಂದೇ ಚೂರು    ಹಾಕುತ್ತಾರಂತೆ ಚಿನ್ನದ ಬೆಸುಗೆ ಕಿಂಟ್ಸುಕುರೋಯ್ ಕಲಾವಿದರು. ಬಿರುಕು ಬೀಳುವುದು ಸಹಜ, ಬಿದ್ದು ಒಡೆಯುವುದು ಸಹಜ ಅಮೂಲ್ಯ ಕುಡಿಕೆ. ಬೆಸುಗೆ ಹಾಕುವುದರಲ್ಲಿದೆ, ಬಾಚಿ ಬಂಧಿಸುವುದರಲ್ಲಿದೆ ಕಲಾವಂತಿಕೆ. ಪಂಜಾಬ ಸಿಂಧು ಗುಜರಾತ ಮರಾಠಾ ದ್ರಾವಿಡ ಉತ್ಕಲ ವಂಗ - ಕೇಳುತ್ತಾ ಹಾಗೇ ಯೋಚಿಸುತ್ತೇನೆ- ಎಲ್ಲವನ್ನೂ ಜೋಡಿಸಿ ಸುಂದರ ತಟ್ಟೆ ಬೆಸೆದ ನಮಗೂ ಗೊತ್ತು ಕಿಂಟ್ಸುಕುರೋಯ್. ನಮ್ಮ ತಟ್ಟೆಯನ್ನು ಮುರಿಯುತ್ತಿದ್ದಾರೆಂಬ ಭಯ ನನ್ನನ್ನು ಕಾಡುವುದಿಲ್ಲ ಈಗ. ಏಕೆ ಕಾತುರ, ಭೀತಿ ಏತಕ್ಕೆ, ಚೊಕ್ಕ ಚಿನ್ನದಂಥ ಮಂದಿ ಇರುವಾಗ? - ಸಿ.ಪಿ. ರವಿಕುಮಾರ್

ಕಾರ್ಟೂನ್ ಭೌತಶಾಸ್ತ್ರ - ಭಾಗ ೧

ಇಮೇಜ್
ಮೂಲ: ನಿಕ್ ಫ್ಲಿನ್ (ಅಮೇರಿಕಾ ಸಂಯುಕ್ತ ರಾಷ್ಟ್ರ) ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಹತ್ತುವರ್ಷಕ್ಕಿಂತ ಚಿಕ್ಕಮಕ್ಕಳಿಗೆ ಗೊತ್ತಿರಕೂಡದು: ನಮ್ಮ ವಿಶ್ವ ಸದಾ ಹಿಗ್ಗುತ್ತಲೇ ಇರುತ್ತದೆ, ನಿರ್ವಾತದಲ್ಲಿ ಮುಖ ತೂರಿಸುವ ತಾರಾಗಣಗಳನ್ನು  ಇಡಿಯಾಗಿ ಕಬಳಿಸುತ್ತವೆ ತಾರಾಗಣಗಳು, ಸೌರ ವ್ಯವಸ್ಥೆಗಳು ಕುಸಿಯುತ್ತವೆ, ಎಲ್ಲವೂ ನಡೆಯುತ್ತದೆ  ನಿಶ್ಶಬ್ದ ಚಲನಚಿತ್ರದಲ್ಲಿ ನಡೆಯುವ ಹಾಗೆ, ಇತ್ಯಾದಿ.  ಹತ್ತು ವರ್ಷವಾದಾಗ ನಾವಿನ್ನೂ ತುಳಿಯುತ್ತಿರುತ್ತೇವೆ  ಕಾರ್ಟೂನ್ ಅನಿಮೇಶನ್ ನಿಯಮಗಳ ಕಲಿಕೆಯ ಹಾದಿ ಅಲ್ಲಿ ಯಾರೋ ಒಬ್ಬ ಬರೆದರೆ ಬಂಡೆಯ ಮೇಲೆ ಬಾಗಿಲ ಚಿತ್ರ  ತೆರೆದು ಒಳಹೋಗಬಲ್ಲ ಅವನೊಬ್ಬ ಮಾತ್ರ.  ಪ್ರಯತ್ನಿಸಿದರೆ ಬೇರೆ ಯಾರಾದರೂ ಬಂಡೆಗೆ ಡಿಕ್ಕಿ ಹೊಡೆದು ಚೂರುಚೂರು.  ಹತ್ತು ವರ್ಷದ ಮಕ್ಕಳ ಪ್ರಪಂಚದಲ್ಲಿ ಇಷ್ಟು ಸಾಕು - ಹೊತ್ತಿ ಉರಿಯುವ ಮನೆಗಳು,  ಫೇಲಾದ ಕಾರ್ ಬ್ರೇಕು, ಮುಳುಗುವ ಹಡಗುಗಳು, ಭೂಮಿಯ ಮೇಲೆ ಆಕ್ರಮಣ  ನಡೆಸುವ ಅದೆಷ್ಟೋ ದುಷ್ಟ ಶಕ್ತಿ,  ಇವರೇ ಅಲ್ಲಿ ನಾಯಕರು. ನುಗ್ಗಬಹುದು  ಓಡುತ್ತಾ ಬಂದು  ಹೊತ್ತಿ ಉರಿಯುವ ಮನೆಯೊಳಗೆ, ಪಾರಾಗಲು  ದೋಣಿಗಳಿವೆ ಹಡಗುಗಳಲ್ಲಿ,  ಧಾವಿಸುತ್ತವೆ ಟ್ರಕ್ಕುಗಳು, ಏಣಿಗಳನ್ನು ಹೊತ್ತು.  ಮೇಲಿಂದ ನೆಗೆದರೆ ಹಿಡಿದುಕೊಳ್ಳುತ್ತಾರೆ, ಜೀವ ಪಾರು.   ಮಗು  ಸ್ಕೂಲ್ ಬಸ್ ಚಾವಣಿಯ ಮೇಲೆ ಕೈಯಿಟ್ಟು  ನಡೆಸಬಲ್ಲಳು ಅದನ

ಆಟೋಕಾಪ್ಟರ್

ಇಮೇಜ್
ಆಟೋಕಾಪ್ಟರ್ ಮಾಡುವೆನಮ್ಮಾ ಆಟೋಕಾಪ್ಟರ್ ಮಾಡುವೆನು! ಆಟೋ ಮೇಲ್ಗಡೆ ರೆಕ್ಕೆಯ ಕಟ್ಟಿ ಆಗಸದಲ್ಲಿ ಹಾರುವೆನು! ಬೆಂಗಳೂರು ಬರಿ ಟ್ರಾಫಿಕ್ ಊರು ಎನ್ನುತ ಎಲ್ಲರೂ ದೂರುವರು! ಆದರು ಎಲ್ಲರೂ ಇಲ್ಲೇ ಬಂದು ತಮ್ಮಯ ಝಂಡಾ ಊರುವರು! ದಿನದಿನ ಕಳೆಯುತ ಟ್ರಾಫಿಕ್ ಬೆಳೆದು ಆಗುತ್ತಿದೆ ಹನುಮನ ಬಾಲ! ಮೆಟ್ರೋ, ಫ್ಲೈ ಓವರ್ ರಸ್ತೆಗಳಿಂದ ದೂಡಬಹುದೇನೋ ಕೆಲಗಾಲ! ಟ್ರಾಫಿಕ್ ಪ್ರಾಬ್ಲಮ್ಮಿಗೆ ನೋಡಮ್ಮಾ ಕಂಡುಹಿಡಿಯುವೆನು ಸೊಲ್ಯೂಷನ್! ಹೊಸಕಾಲಕೆ ಬೇಕೇ ಬೇಕಮ್ಮಾ ಹೊಸಹೊಸ ಹೊಸಹೊಸ ಇನೊವೇಷನ್! ಆಟೋಕಾಪ್ಟರ್ ಮಾಡುವೆನಮ್ಮಾ ಆಟೋಕಾಪ್ಟರ್ ಮಾಡುವೆನು! ಆಟೋ ಮೇಲ್ಗಡೆ ರೆಕ್ಕೆಯ ಕಟ್ಟಿ ಆಗಸದಲ್ಲಿ ಹಾರುವೆನು! ಕಾಮನ ಬಿಲ್ಲಿನ ರಸ್ತೆಯ ಮೇಲೆ ನನ್ನಯ ಆಟೋ ಓಡುವುದು! ನನ್ನಯ ಅದ್ಭುತ ವಿಮಾನವನ್ನು ಜಗ ಕಣ್ ಬಿಡುತ್ತ ನೋಡುವುದು! - ಸಿ.ಪಿ. ರವಿಕುಮಾರ್