ಮೋಡವೇ ಮಾತಾಡು ನನ್ನೊಡನೆ!

ಮೂಲ ಹಿಂದಿ ರಚನೆ - ಹರಿವಂಶರಾಯ್ ಬಚ್ಚನ್ 
ಕನ್ನಡಕ್ಕೆ - ಸಿ.ಪಿ. ರವಿಕುಮಾರ್ 
File:Storm clouds.jpg

ಮೋಡವೇ ಮಾತಾಡು ನನ್ನೊಡನೆ!

ತುಂಬಿದೆ ಕಗ್ಗತ್ತಲು  ನಿನ್ನೊಳಗೆ
ಕಗ್ಗತ್ತಲು  ತುಂಬಿದೆ ನನ್ನೊಳಗೂ
ಹೇಗೆ ತುಂಬಿಹುದೋ ನಿನ್ನೊಳು ನೋವು 
ಹಾಗೆ ತುಂಬಿಹುದು  ನೋವು  ನನ್ನೊಳಗೂ 
ನಿನ್ನ ಹೃದಯಕೂ  ನನ್ನ ಹೃದಯಕೂ ಆಗದೇ  ಮೇಘವೇ,   ಸಮತುಲನೆ!
ಮೋಡವೇ ಮಾತಾಡು ನನ್ನೊಡನೆ!

ಅಡಗಿದೆ ಹೇಗೋ ನಿನ್ನೊಳು ಅಗ್ನಿ
ಅಡಗಿದೆ ಅಗ್ನಿಯು ನನ್ನೊಳಗೂ
ರಾಗರಂಗುಗಳು ನಿನ್ನೊಳು ಹೇಗೋ 
ಹಾಗೇ ತುಂಬಿವೆ ನನ್ನೊಳಗೂ 
ಇಬ್ಬರೂ ಹೃದಯದ್ವಾರವ ತೆರೆದು  ಹರಿಸುವ ಮರುಕದ ಧಾರೆಯನೇ!
ಮೋಡವೇ, ಮಾತಾಡು ನನ್ನೊಡನೆ!

ಗುಣದೊಳಲ್ಪ ವ್ಯತ್ಯಾಸವು ನನಗೂ 
ನಿನಗೂ ಇರುವುದು ಒಂದು 
ಉಪ್ಪಾಗಿದೆ ನನ್ನಯ ಕಣ್ಣೀರು 
ಮಧುರ ನಿನ್ನ ಪ್ರತಿ ಬಿಂದು 
ವ್ಯರ್ಥವು  ನನ್ನೀ ಕಂಬನಿ, ಮೋಡದ  ಹನಿ  ನೀಡುವುದು ಬದುಕನ್ನೇ! 
ಮೋಡವೇ, ಮಾತಾಡು ನನ್ನೊಡನೆ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)