ಚೈನಾ ಬಿತ್ತುತ್ತಿದೆಯಂತೆ ಚಂದ್ರನ ಮೇಲೆ ಆಲೂ (ಗಜಲ್)

ಸಿ. ಪಿ. ರವಿಕುಮಾರ್ 
Image result for moon grow potato wikipedia

ಚೈನಾ ಬಿತ್ತುತ್ತಿದೆಯಂತೆ ಚಂದ್ರನ ಮೇಲೆ ಆಲೂ
ಮುಂದೊಮ್ಮೆ ಕರೆದೀತು ಚಂದ್ರಿಕೆಯು ಹಾಲು

ಟ್ರಾಕ್ಟರ್ ಓಡಿಸಿ ಚಂದ್ರವದನದ ಮೇಲೆಲ್ಲಾ
ಹದಮಾಡಿ ಬಿತ್ತಬಹುದು ನೆಲಗಡಲೆ ಕಾಳು

ಈಗಾಗಲೇ ಅಲ್ಲಿ ನೆಲೆಸಿರುವ ಉಡುಪಿ ಭಟ್ಟರು
ವಿಸ್ತರಿಸಬಹುದು ಇನ್ನಷ್ಟು ಇಡ್ಲಿವಡೆ ಹೋಟೆಲು

ಬೆಳೆಯಬಹುದು ನಾಳೆ ಇಂದುವಿನ ಮೇಲೆ
ಸೂಜಿಮಲ್ಲಿಗೆ ದುಂಡುಮಲ್ಲಿಗೆಯ ಸಾಲು

ದ್ರಾಕ್ಷಿಬಳ್ಳಿಯು ಹಬ್ಬಿ ಹಳದಿಚಂದ್ರನ ಮೇಲೆ
ತೂಗಬಹುದು ಬಾನಲ್ಲಿ ರಸಭರಿತ ಗೊಂಚಲು

ದ್ರಾಕ್ಷಾರಸವನ್ನು ತುಂಬಿತುಂಬಿ ಹೂಜಿಗಳಲ್ಲಿ
ಸಾಕೀಗಳು ನಿಂತಾರು ಚಂದಿರನ ಮೇಲೂ

ಮಧುಶಾಲೆ, ಸಾಕೀ, ಇತ್ಯಾದಿ ಕನವರಿಸುವ ಶಾಯರರು
ಹೋಗಿ ನಿಂತಾರು ಹಿಡಿದು ತಳವಿರದ ಬಟ್ಟಲು

ಚಂದ್ರಮುಖಿ ಎಂದೆಲ್ಲಾ ಕವನಿಸುವ ಪ್ರೇಮಕವಿ 
ಉಪಮೆಯಿಲ್ಲದೆ ಕಾಣುವನೆ ಪ್ರೇಮದಲಿ ಸೋಲು?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)