ಆಟೋಕಾಪ್ಟರ್



ಆಟೋಕಾಪ್ಟರ್ ಮಾಡುವೆನಮ್ಮಾ
ಆಟೋಕಾಪ್ಟರ್ ಮಾಡುವೆನು!

ಆಟೋ ಮೇಲ್ಗಡೆ ರೆಕ್ಕೆಯ ಕಟ್ಟಿ
ಆಗಸದಲ್ಲಿ ಹಾರುವೆನು!

ಬೆಂಗಳೂರು ಬರಿ ಟ್ರಾಫಿಕ್ ಊರು
ಎನ್ನುತ ಎಲ್ಲರೂ ದೂರುವರು!
ಆದರು ಎಲ್ಲರೂ ಇಲ್ಲೇ ಬಂದು
ತಮ್ಮಯ ಝಂಡಾ ಊರುವರು!

ದಿನದಿನ ಕಳೆಯುತ ಟ್ರಾಫಿಕ್ ಬೆಳೆದು
ಆಗುತ್ತಿದೆ ಹನುಮನ ಬಾಲ!
ಮೆಟ್ರೋ, ಫ್ಲೈ ಓವರ್ ರಸ್ತೆಗಳಿಂದ
ದೂಡಬಹುದೇನೋ ಕೆಲಗಾಲ!


ಟ್ರಾಫಿಕ್ ಪ್ರಾಬ್ಲಮ್ಮಿಗೆ ನೋಡಮ್ಮಾ
ಕಂಡುಹಿಡಿಯುವೆನು ಸೊಲ್ಯೂಷನ್!
ಹೊಸಕಾಲಕೆ ಬೇಕೇ ಬೇಕಮ್ಮಾ
ಹೊಸಹೊಸ ಹೊಸಹೊಸ ಇನೊವೇಷನ್!

ಆಟೋಕಾಪ್ಟರ್ ಮಾಡುವೆನಮ್ಮಾ
ಆಟೋಕಾಪ್ಟರ್ ಮಾಡುವೆನು!
ಆಟೋ ಮೇಲ್ಗಡೆ ರೆಕ್ಕೆಯ ಕಟ್ಟಿ
ಆಗಸದಲ್ಲಿ ಹಾರುವೆನು!


ಕಾಮನ ಬಿಲ್ಲಿನ ರಸ್ತೆಯ ಮೇಲೆ
ನನ್ನಯ ಆಟೋ ಓಡುವುದು!
ನನ್ನಯ ಅದ್ಭುತ ವಿಮಾನವನ್ನು
ಜಗ ಕಣ್ ಬಿಡುತ್ತ ನೋಡುವುದು!


- ಸಿ.ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)