ಕಿಂಟ್ಸುಕುರೋಯ್




ಜಪಾನ್ ದೇಶದಲ್ಲಿ
ಜಾರಿ ಮುರಿದಾಗ ಪಿಂಗಾಣಿ ಬಟ್ಟಲು
ನಾಜೂಕಾಗಿ ಜೋಡಿಸಿ ಒಂದೊಂದೇ ಚೂರು  
ಹಾಕುತ್ತಾರಂತೆ ಚಿನ್ನದ ಬೆಸುಗೆ
ಕಿಂಟ್ಸುಕುರೋಯ್ ಕಲಾವಿದರು.
ಬಿರುಕು ಬೀಳುವುದು ಸಹಜ,
ಬಿದ್ದು ಒಡೆಯುವುದು ಸಹಜ ಅಮೂಲ್ಯ ಕುಡಿಕೆ.
ಬೆಸುಗೆ ಹಾಕುವುದರಲ್ಲಿದೆ,
ಬಾಚಿ ಬಂಧಿಸುವುದರಲ್ಲಿದೆ ಕಲಾವಂತಿಕೆ.

ಪಂಜಾಬ ಸಿಂಧು ಗುಜರಾತ ಮರಾಠಾ
ದ್ರಾವಿಡ ಉತ್ಕಲ ವಂಗ -
ಕೇಳುತ್ತಾ ಹಾಗೇ ಯೋಚಿಸುತ್ತೇನೆ-
ಎಲ್ಲವನ್ನೂ ಜೋಡಿಸಿ
ಸುಂದರ ತಟ್ಟೆ ಬೆಸೆದ ನಮಗೂ ಗೊತ್ತು
ಕಿಂಟ್ಸುಕುರೋಯ್.
ನಮ್ಮ ತಟ್ಟೆಯನ್ನು ಮುರಿಯುತ್ತಿದ್ದಾರೆಂಬ
ಭಯ ನನ್ನನ್ನು ಕಾಡುವುದಿಲ್ಲ ಈಗ.
ಏಕೆ ಕಾತುರ, ಭೀತಿ ಏತಕ್ಕೆ,
ಚೊಕ್ಕ ಚಿನ್ನದಂಥ ಮಂದಿ ಇರುವಾಗ?

- ಸಿ.ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)