ಕುಸುಮಿತ ಸೌರಭದ ಧಗೆ
ಮೂಲ ಹಿಂದಿ ರಚನೆ - ಗುಲ್ಜಾರ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್

ಲತಾ ಮಂಗೇಶ್ಕರ್ ಅವರ ಅದ್ಭುತ ಗಾಯನದಲ್ಲಿ ಅರಳಿದ ಗುಲ್ಜಾರ್ ಅವರ ಪಂಕ್ತಿಗಳನ್ನು ಕನ್ನಡಕ್ಕೆ ಅನುವಾದಿಸುವ ಪ್ರಯತ್ನ. ಖಾಮೋಶಿ ಚಿತ್ರದಲ್ಲಿ ಬಳಸಿಕೊಂಡ ಈ ಕವಿತೆ ಕಥೆಯ ಮುಖ್ಯಪಾತ್ರದ ಮನಸ್ಸಿಗೆ ಹಿಡಿದ ಕನ್ನಡಿ. ಭಗ್ನಪ್ರೇಮದ ಕಾರಣದಿಂದ ಉಂಟಾದ ಮನೋವಿಕಲ್ಪದಿಂದ ಆಸ್ಪತ್ರೆ ಸೇರಿದ ತರುಣನನ್ನು ಗುಣಪಡಿಸಲು ಒಬ್ಬ ದಾದಿಯನ್ನು ಆಯ್ಕೆ ಮಾಡಲಾಗುತ್ತದೆ. ಅವಳು ಆತನೊಂದಿಗೆ ಪ್ರೀತಿಯನ್ನು ನಟಿಸಬೇಕು. ದೂರದಿಂದಲೇ ಆತನನ್ನು ಪ್ರೀತಿಸಬೇಕು. ಅವನೊಂದಿಗೆ ನಿಜವಾದ ಪ್ರೇಮದ ಭಾವನೆಯನ್ನು ಬೆಳೆಸಿಕೊಳ್ಳಬಾರದು!
ಕಂಡಿತೇ ಕಂಗಳಲ್ಲಿ ಕುಸುಮಿತ ಸೌರಭದ ಧಗೆ?
ಸ್ಪರ್ಶಿಸಿ ಸಂಬಂಧವನು ಆರೋಪಿಸುವುದೇಕೆ ?
ಬರಿ ಮನವರಿಕೆಗಿದು, ದೂರದಿಂದ ಅನುಭವಿಸು
ಪ್ರೀತಿಯಾಗೇ ಇರಲಿ ಪ್ರೀತಿ, ಏತಕೆ ಹೆಸರು?
ಇಲ್ಲ ಪ್ರೀತಿಗೆ ಭಾಷೆ, ಇಲ್ಲ ನಾಲಿಗೆ ಮಾತು,
ಆಲಿಸುವ ಮೌನವು ಬಾಯ್ತೆರೆಯದೆ ಮಾತಾಡುವುದು,
ಎಂದಿಗೂ ಆರದಿದು, ನಿಲ್ಲದು, ತಂಗದು ಎಲ್ಲೂ,
ಬೆಳಕಿನ ಹನಿಯು ಯುಗಾಂತರದಿಂದಲು ಹರಿಯುವುದು
ಮಂದಹಾಸವು ಎಲ್ಲೋ ಅರಳುವುದು ಕಣ್ಣೊಳಗೆ
ಮತ್ತು ಹೊಂಬೆಳಕು ಅಗೋ ಮುಚ್ಚಿದ ರೆಪ್ಪೆಯ ಮೇಲೆ,
ಬಿರಿಯದ ಅಧರಗಳು, ಅದುರುವ ತುಟಿಗಳ ಮೇಲೆ
ಕಂಪಿಸುತ್ತವೆ ಎಷ್ಟೋ ಕಥೆಗಳ ನಿಶ್ಶಬ್ದದಲೆ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ