ನ್ಯಾಮ್ ಎಂಬ ಮಂತ್ರ
ನಮ್ಮಲ್ಲಿ ನಡೆದುಕೊಂಡೇ ಬಂದ ಪರಂಪರೆ 'ನ್ಯಾಮ್'
ಓ ನಾನ್ ಅಲೈನ್ಡ್ ಮೂವ್ಮೆಂಟ್, ನಿನಗೆ ನವಕೋಟಿಪ್ರಣಾಮ್
ಒಬ್ಬರು ಉತ್ತರದತ್ತ ಎಳೆಯುತ್ತೇವೆ ಇನ್ನೊಬ್ಬರು ದಕ್ಷಿಣದತ್ತ
ಮೂಡಣದ ಕಡೆ ಒಬ್ಬರಿಗೆ ಮತ್ತೊಬ್ಬರಿಗೆ ಪಡುವಣದ ಕಡೆ ಚಿತ್ತ
ಬಲಗಡೆಗೆ ರಥವನ್ನು ಎಳೆದೊವೈಯುವಾಸೆ ಕೆಲವರಿಗೆ
ಇನ್ನು ಕೆಲವರ ಹಠ, ಬೇಡ ಹೋಗೋಣ ಎಡಗಡೆಗೆ
ಕೊನೆಗೆ ತಳ್ಳುತ್ತೇವೆ ರಥ ತೋಚಿದ ದಿಕ್ಕಿನಲ್ಲಿ ದಮ್ ಲಗಾಕೆ
ಇನ್ನೆಲ್ಲೋ ಸಮವಿರುದ್ಧ ಬಲ ಹಾಕುತ್ತಿರುವುದು ಯಾರು, ಯಾಕೆ?
ಆಗಿಬಿಟ್ಟಿದೆಯಲ್ಲ ನಮ್ಮ ಬಲಾಬಲವು ಜೀರೋ ಸಮ್ ಗೇಮ್
ನಮ್ಮಲ್ಲಿ ಲಾಗಾಯ್ತಿನಿಂದಲೂ ಪ್ರಚಲಿತವಿತ್ತು "ನ್ಯಾಮ್"
ಇಷ್ಟೆಲ್ಲಾ ಬಲಗಳ ನಡುವೆಯೂ ಮುಂದೆ ಹೋಗುತ್ತಿದ್ದರೆ ರಥ
ಯಾರು ನೂಕುತ್ತಿದ್ದಾರೋ ನಮ್ಮ ಅರಿವಿಲ್ಲದೆ ಸತತ!
ನಾವು ಹಾಗೇ, ನಮಗೆ ನ್ಯಾಮ್ ಅಂದರೆ ಒಲವು
ಅಲೈನ್ ಆಗದೆ ಯಾರೋ ತಳ್ಳಿದೆಡೆಗೆ ಸಾಗುವೆವು!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ