ರೊಬಾಟ್ ನೋಟ



Image result for robot


ರೋಬಾಟ್ ಹೋಗುತ್ತದೆ ನೋಡಿ ಅಂಗಡಿಗೆ
ರೋಬಾಟ್ ಮಾಡಿ ಬಡಿಸುತ್ತದೆ ಅಡುಗೆ

ಉಡಿಸುತ್ತದೆ  ರೋಬಾಟ್  ಮದುವಣಿಗನ ಉಡುಗೆ
ಮುಡಿಸುತ್ತದೆ ರೋಬಾಟ್  ಹೂ ವಧುವಿನ ಜಡೆಗೆ

ರೋಬಾಟ್ ಹೊರುತ್ತದೆ ಸಿಹಿನೀರಿನ ಗಡಿಗೆ
ರೋಬಾಟ್ ನಡೆಯುತ್ತದೆ ನಾಟ್ಯದ ನಡಿಗೆ

ರೋಬಾಟ್ ರೋಬಾಟ್ ಅಡಿಯಿಂದ ಮುಡಿಗೆ
ರೋಬಾಟ್ ಬೇಕಪ್ಪ ಮನುಕುಲ ಮುನ್ನಡೆಗೆ

ಎಲ್ಲ ಕೆಲಸವ ಬಿಟ್ಟು ರೋಬಾಟಿನ ಅಡಿಗೆ
ತಿನ್ನುತ್ತಾ ಕೂಡೋಣ ಹಪ್ಪಳ ಸಂಡಿಗೆ

ಯಾಕೆ ನೋಡುತ್ತಿದೆ ರೋಬಾಟ್ ಈ ಕಡೆಗೆ?
ರೋಬಾಟ್ ಕೈಯಲ್ಲಿ ಏತಕ್ಕಿದೆ ಬಡಿಗೆ

- ಸಿ. ಪಿ. ರವಿಕುಮಾರ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)