ಸುಮ್ಮನಿರುವುದು ಹೇಗೆ?
ಮಿತ್ರರೊಬ್ಬರು ಹೀಗೇ ಫೇಸ್ ಬುಕ್ ಮೇಲೆ
ಕಾಲೆಳೆಯಲು ಕೇಳಿದರು - ಸುಮ್ಮನಿರುವುದು ಹೇಗೆ?
ಉತ್ತರಗಳು ಬಂದವು ಎಲ್ಲಾ ದಿಕ್ಕುಗಳಿಂದ
ದಿಗಂತಗಳು ಮಾರ್ದನಿಸುವ ಹಾಗೆ.
ನಕ್ಕರು ಕೆಲವರು ಜೋರಾಗಿ,
ಹಾಕಿದರು ಜಾಣ ಕಾಮೆಂಟು
ಗಂಭೀರ ಉತ್ತರಗಳೂ ಬಂದವು
ಎಲ್ಲೋ ಒಂದು ಪರ್ಸೆಂಟು
ಇಷ್ಟೊಂದು ಸಲಹೆ ಬಂದದ್ದು ಕಂಡಾಗ
ಸುಮ್ಮನಿರುವುದು ಹೇಗೆಂಬ ಪ್ರಶ್ನೆಗೆ
ಮಿತ್ರರು ಹುರಿದುಂಬಿ ಕೇಳಿದರು, ಬರುವಿರಾ
ಕೆಲಸ ಮಾಡೋಣ ಒಟ್ಟಿಗೆ?
ಕನ್ನಡದಲ್ಲಿದೆ ಮಾಡುವುದು ಸಾಕಷ್ಟು
ಕಟ್ಟಬೇಕಾಗಿದೆ ಬಹಳ
ವಿಕಿಪೀಡಿಯ, ವಿಜ್ಞಾನ, ತಂತ್ರಾಂಶ, ಇತ್ಯಾದಿ
ನೂರೆಂಟು ಕೋಟಿ ವಿಪುಲ.
ಅಬ್ಬ! ಏನಾಯಿತೋ ಸುಮ್ಮನಿದ್ದರು ಎಲ್ಲರೂ
ಎಲ್ಲ ದಿಕ್ಕುಗಳಲ್ಲೂ ಮೌನ ಬೃಹದಾಕಾರ.
ಸುಮ್ಮನಿರುವುದು ಹೇಗೆಂಬ ಪ್ರಶ್ನೆಗೆ
ಮಿತ್ರರಿಗೆ ಈಗ ಸಿಕ್ಕಿಬಿಟ್ಟಿದೆ ನಿಜವಾದ ಪರಿಹಾರ.
- ಸಿ.ಪಿ. ರವಿಕುಮಾರ್ (೨೦೧೮)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ