ಪ್ರಾರ್ಥನಾಮಂದಿರ
ಮೂಲ: ಜೆರ್ರಿ ಆಸ್ಬಾರ್ನ್
ಅನುವಾದ: ಸಿ ಪಿ ರವಿಕುಮಾರ್
ಕರೆದೊಯ್ಯಿರಿ ನನ್ನನ್ನು ಚರ್ಚ್ ಒಂದಕ್ಕೆ
ಇಲ್ಲ, ಕಲ್ಲಿನಲ್ಲಿ ಕಟ್ಟಿದ ಕತೀಡ್ರಲಿಗಲ್ಲ
ಹತ್ತಾಳು ಎತ್ತರದ ಗೋಪುರದ ಗುಡಿಗಲ್ಲ
ಜನರು ಕಿಕ್ಕಿರಿದ ಮಂದಿರಕ್ಕಲ್ಲ
ಇಲ್ಲ, ಕಲ್ಲಿನಲ್ಲಿ ಕಟ್ಟಿದ ಕತೀಡ್ರಲಿಗಲ್ಲ
ಹತ್ತಾಳು ಎತ್ತರದ ಗೋಪುರದ ಗುಡಿಗಲ್ಲ
ಜನರು ಕಿಕ್ಕಿರಿದ ಮಂದಿರಕ್ಕಲ್ಲ
ಕರೆದೊಯ್ಯಿರಿ ನನ್ನನ್ನು ಚರ್ಚ್ ಒಂದಕ್ಕೆ
ಆದರೆ ಬೆಂಚುಗಳ ಸಾಲಿನಿಂದ ದೂರಕ್ಕೆ
ಬೋಧಕರಿಂದ ಆದಷ್ಟೂ ದೂರ
ಸುದ್ದಿಪುಕಾರುಗಳಿಂದ ದೂರ
ಕರೆದೊಯ್ಯಿರಿ ನನ್ನನ್ನು ಚರ್ಚ್ ಒಂದಕ್ಕೆ
ಎಲ್ಲಿ ಹಸಿರು ಹುಲ್ಲು ಬೆಳೆಯುವುದೋ ಅಲ್ಲಿಗೆ
ಎಲ್ಲಿ ಹರಿವ ನದಿಯ ದಡದಲ್ಲಿ ಅತ್ತಿತ್ತ
ಮೊಲಗಳು ಓಡುತ್ತಾ ನಲಿಯುತ್ತವೋ ಮುಕ್ತ
ಎಲ್ಲಿ ಕಂಚಿನ ಗಂಟೆ ಇಲ್ಲವೋ ಬಾಜಿಸಲು
ಎಲ್ಲಿ ಉಲಿಯುತ್ತವೋ ಹಕ್ಕಿಗಳ ಕೊರಳು
ಎಲ್ಲಿ ಮೇಲೆದ್ದು ಇಂಚರಗಳ ಸ್ವರಮೇಳ
ಸಂಭ್ರಮಿಸುವುದೋ ಕೆಂಪಾದಾಗ ಮೂಡಣದಿ ಮುಗಿಲು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ