ರಹಸ್ಯ

ಮೂಲ: ಜಾನ್ ಬಾಯ್ಲ್ ಒರೇಲಿ 
ಕನ್ನಡಕ್ಕೆ: ಸಿ ಪಿ ರವಿಕುಮಾರ್ 



ಯಾವ ಪದದಲ್ಲಿದೆ ಹೇಳಿ ನಿಜವಾದ ಒಳಿತು
ಎಂದು ಕೇಳಿದೆ ನಾನು, ಯೋಚಿಸುತ್ತಾ ಕುಳಿತು.

ಸುವ್ಯವಸ್ಥೆಯಲ್ಲಿ, ಎಂದಿತು ನ್ಯಾಯಾಲಯ;
ಜ್ಞಾನಾರ್ಜನೆಯಲ್ಲಿ, ಎಂದಿತು ವಿದ್ಯಾಲಯ;
ಸತ್ಯದಲ್ಲಿ, ಎಂದನು ಒಬ್ಬ ವಿವೇಕಿ;
ಲೋಲುಪ್ತತೆಯಲ್ಲಿ, ಎಂದನೊಬ್ಬ ಅವಿವೇಕಿ;
ಪ್ರೇಮದಲ್ಲಿ, ಎಂದಳು ಒಬ್ಬ ನವಯುವತಿ;
ಚೆಲುವಿನಲ್ಲಿ, ಎಂದನು ಒಬ್ಬ ಯುವಕ, ಅಲ್ಪಮತಿ;
ಸ್ವಾತಂತ್ರ್ಯದಲ್ಲಿ, ಎಂದನು ಒಬ್ಬ ಕನಸಿಗ;
ಮನೆಯಲ್ಲಿ, ಎಂದ ಒಬ್ಬ ಋಷ್ಯಶೃಂಗ;
ಪ್ರಸಿದ್ಧಿಯಲ್ಲಿ, ಎಂದನು ಒಬ್ಬ ಸೈನಿಕ;
ಸಮಾನತೆಯಲ್ಲಿ, ಎಂದನು ದಾರ್ಶನಿಕ.

ಅನ್ನಿಸಿತು ಇದಾವುದೂ ಸರಿಯಾದ ಉತ್ತರ ಅಲ್ಲವೆಂದು
ಮತ್ತು ಎದೆಯಾಳದಲ್ಲಿ ಎಲ್ಲೋ ಕೇಳಿಸಿತು ದನಿಯೊಂದು 
ಹೊಳೆಯಿತು ನನಗೊಂದು ಉತ್ತರ:  ಪ್ರತಿಯೊಂದು 
ಹೃದಯದಲ್ಲೂ  ಅಡಗಿರುವ ಗುಪ್ತಪದವೆಂದು 
ಇಗೋ ಹೇಳಿಬಿಡುವೆನು ಈ ರಹಸ್ಯವನ್ನು ನಾನೇ.
ಆ ಪದದ ಹೆಸರು ಏನೆಂದರೆ : ಕರುಣೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ