ಚಳಿಗಾಲದ ಪದ್ಯ
ಮೂಲ: ನಿಕ್ಕಿ ಜಿಯೋವನಿ
ಕನ್ನಡಕ್ಕೆ: ಸಿ ಪಿ ರವಿಕುಮಾರ್
ನನ್ನ ಹುಬ್ಬಿನ ಮೇಲೆ ಒಮ್ಮೆ ಜಾರಿ ಬಿದ್ದಾಗ
ಒಂದು ಹಿಮಕಣ ನನಗದು
ಆಪ್ಯಾಯವೆನ್ನಿಸಿ
ಅದಕ್ಕೆ ಮುತ್ತಿಟ್ಟಾಗ
ಅದಕ್ಕೆಷ್ಟು ಸಂತೋಷವಾಯಿತು
ಎಂದರೆ ಕರೆದು ತಂದಿತು ತನ್ನ ಅಕ್ಕ ತಮ್ಮ ಅಣ್ಣ ತಂಗಿ
ಬಳಗವನ್ನೆಲ್ಲಾ ಮತ್ತು ಹೀಗೆ
ನನ್ನ ಸುತ್ತ ಹೆಣೆದುಕೊಂಡ ಹಿಮದ ಬಲೆಯನ್ನು
ನಾನು ಔಕಿದಾಗ ಸುರಿಯಿತು ವಸಂತದ ಮಳೆ
ಮತ್ತು ನಾನು ಅದರ ಕೆಳಗೆ ಮಿಸುಕಾದಡೆ ನಿಂತು
ಒಂದು ಹೂವಾಗಿ ಅರಳಿದೆ.
ಒಂದು ಹಿಮಕಣ ನನಗದು
ಆಪ್ಯಾಯವೆನ್ನಿಸಿ
ಅದಕ್ಕೆ ಮುತ್ತಿಟ್ಟಾಗ
ಅದಕ್ಕೆಷ್ಟು ಸಂತೋಷವಾಯಿತು
ಎಂದರೆ ಕರೆದು ತಂದಿತು ತನ್ನ ಅಕ್ಕ ತಮ್ಮ ಅಣ್ಣ ತಂಗಿ
ಬಳಗವನ್ನೆಲ್ಲಾ ಮತ್ತು ಹೀಗೆ
ನನ್ನ ಸುತ್ತ ಹೆಣೆದುಕೊಂಡ ಹಿಮದ ಬಲೆಯನ್ನು
ನಾನು ಔಕಿದಾಗ ಸುರಿಯಿತು ವಸಂತದ ಮಳೆ
ಮತ್ತು ನಾನು ಅದರ ಕೆಳಗೆ ಮಿಸುಕಾದಡೆ ನಿಂತು
ಒಂದು ಹೂವಾಗಿ ಅರಳಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ