ಹಿಮ ಬಿದ್ದ ದಿವಸ

 


ಮೂಲ: ಬೆನ್ ಬಾನ್ಯಾರ್ಡ್

ಕನ್ನಡಕ್ಕೆ: ಸಿ ಪಿ ರವಿಕುಮಾರ್ 



ಅಂಗಡಿಗೆ ಹೋಗಿ ಹಾಲು ಬ್ರೆಡ್ ಮತ್ತು ಬೆಂದ ಬೀನ್ಸ್ ಒಂದಿಷ್ಟು 
ತುಂಬಿಸಿಕೊಂಡು ಬರೋಣ ಅಂದಷ್ಟೇ ಇರಾದೆಯಾಗಿತ್ತು
ಆದರೆ ನೋಡಿ ಮಂಜು  ಸಿಕ್ಕಿಹಾಕಿಸಿದೆ ಎಲ್ಲೋ ನಡುವಿನಲ್ಲಿ 
ಸುತ್ತಲೂ ಹರಡಿಕೊಂಡ ಹೊಳೆವ ಬಿಳಿ ಮಡುವಿನಲ್ಲಿ
ಕಟ್ಟಲಾಗದು ಉಂಡೆ ಹಿಮವನ್ನು ಕೊಡಲಾಗದು ಹಿಮಮಾನವನ ಆಕಾರ
ಎರಡು ವರ್ಷಗಳ ನಂತರ ಇಂಥ ಪುಡಿಪುಡಿಯಾದ ಹಿಮದ ಪುನರಾವತಾರ
ಆದರೆ ಅಂಗಾತ ಮಲಗಿ ಚಲಿಸಿದರೆ ಕೈಗಳನ್ನು ಅತ್ತಿತ್ತ
ಮೋಸವಿಲ್ಲದೆ ಮೂಡುವುದು ಹಿಮದಲ್ಲಿ ದೇವತೆಯ ಚಿತ್ರ.
ಮಲಗಿದಲ್ಲೇ ನೋಡಿದರೆ ಗಾಯಗೊಂಡ ಆಕಾಶದತ್ತ
ಕಾಲರಿನ ಮೇಲೆ ಬೀಳುವುದು ಹಿಮ ತಪ್ಪೊಪ್ಪಿಕೊಳ್ಳುತ್ತಾ.
 ಸ್ತಬ್ಧವಾಗಿದೆ ಕೊನೆಗೂ ವಾಹನಗಳ ಕರ್ಕಶ ಇಂಜಿನ್ ಮೊರೆತ
ಬದಲಿಗೆ ಕೇಳುತ್ತಿದೆ ಮಕ್ಕಳ ನಗೆ ಕೇಕೆ ಧಡಬಡ ಓಡಾಟ.
ರಾಬಿನ್ ಹಕ್ಕಿಯೊಂದು ಕೂತಿದೆ  ಕ್ರಿಸ್ಮಸ್ ಕಾರ್ಡಿಗೆ ಭಂಗಿ ನೀಡುತ್ತ
ಮಲಗಿದಲ್ಲೇ ಯೋಚಿಸುತ್ತೇನೆ ಇನ್ನೆಷ್ಟು ಹೊತ್ತು ಇದ್ದೀತು ಈ ಅದೃಷ್ಟ?



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ