ಪುಸ್ತಕಪ್ರೇಮ

 ಎಲ್ಲ ಸಂಪುಟಗಳ ಬೆನ್ನೆಲುಬುಗಳೂ ಬಿರುಕು ಬಿಟ್ಟು
ಬಯಲಾಗಿ ಎಲ್ಲ ಕಥನಕುತೂಹಲಗಳ ಗುಟ್ಟು
ವಿದಾಯ ಹೇಳಿದವು  ಸುಪರಿಚಿತ ಪಾತ್ರಗಳೆಲ್ಲ ಮತ್ತು
ನಸುಕಿನವರೆಗೂ ಮೌನವೇ ಮರುನುಡಿಯುತ್ತಿತ್ತು.

ಆಗ ನಡುಗುವ ಕೈಗಳನ್ನು ಮೇಲೆತ್ತಿ ಪಣ ತೊಟ್ಟು
ನಿರ್ಧರಿಸಿದೆ ಊರಿಗೆ ಹೋಗಲೇ ಬೇಕು ಇವತ್ತು
ಕನಿಷ್ಠ ಪುಸ್ತಕದಂಗಡಿಯ ಬಾಗಿಲಿನವರೆಗಾದರೂ ಸಾಗಿ
ವ್ಯಯಿಸಬೇಕು ಕೂಡಿಟ್ಟ ಅಷ್ಟಿಷ್ಟು ಸಂಪತ್ತು.

ಖಂಡಿತ ಯಾವ ಖಾಲಿ ಕಪಾಟಿಗೂ ಇರದು
ನನ್ನ ಪಾಡನ್ನು ನೋಡಿ ನಗುವ ಗಮ್ಮತ್ತು
ಯಾವ ಅನಾಥ ಮೂಲೆಗೂ ಇರದು
ಮಂದ ಬೆಳಕಿನ ನಸೀಬು, ಕತ್ತಲೆಯ ನೌಬತ್ತು.

ಮೂಲ: ಶರ್ಲೀನ್ ಸೈಲಡನ್ 

ಕನ್ನಡಕ್ಕೆ : ಸಿ ಪಿ ರವಿಕುಮಾರ್





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ