ಕಾಗೆ ಮತ್ತು ಗೂಗೆ

 ನಾನು ನರ್ತಿಸಲೇ ಎಂದು ಕೇಳಿತು ಕಾಗೆ

ಕೆಳಗೆ ನೋಡುತ್ತಿತ್ತು ಮರದಲ್ಲಿದ್ದ ಗೂಗೆ 

ಬೇಕೆನ್ನಿಸಿದ್ದು ಮಾಡು ಎಂದು ಉತ್ತರಿಸಿದಾಗ ಗೂಗೆ 

ಏನೂ ತೋರದೆ ಮುಖ ಗಂಟಿಕ್ಕಿತು ಕಾಗೆ

ನಾನು ಕೇಳಿದ್ದು ನಿನ್ನ ಅನುಮತಿಯನ್ನು

ಎಂದು ಕಾಗೆಯು ಕಾಲಿಂದ ಕೆದರಿತು ಮಣ್ಣು

ನೀನು ಹಾರಬಲ್ಲೆ, ನೆನಪಿರಲಿ, ನೀನು ಹಕ್ಕಿ,

ಪದಗಳ ಬಲೆಯಲ್ಲಿ ಕೊಳ್ಳದಿರು ಸಿಕ್ಕಿ.


ಮೂಲ: ಮಾರ್ಟಿನ್ ಹಿಚ್ 

ಕನ್ನಡಕ್ಕೆ - ಸಿ ಪಿ ರವಿಕುಮಾರ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ