ಗೋಚರ
ನೋಡಿದೆನು ನಾನು
ಹಸಿರೆಲೆಯ ನಡುವೆ
ಒಂದು ನೀಲಿ ಚುಕ್ಕಿ __
ನೋಡಿದೆನು ತಿರುಗಿ
ನಕ್ಷತ್ರವಲ್ಲ
ನಭನೀಲ ವರ್ಣ ಹಕ್ಕಿ!
ಹಸಿರೆಲೆಯ ನಡುವೆ
ಒಂದು ನೀಲಿ ಚುಕ್ಕಿ __
ನೋಡಿದೆನು ತಿರುಗಿ
ನಕ್ಷತ್ರವಲ್ಲ
ನಭನೀಲ ವರ್ಣ ಹಕ್ಕಿ!
ನೋಡಿದೆನು ನಾನು
ಲತೆಯಲ್ಲಿ ತೂಗುತಿಹ
ರಸಪೂರ್ಣ ಕಪ್ಪು ದ್ರಾಕ್ಷಿ __
ನೋಡಿದೆನು ತಿರುಗಿ
ಕಾಣಿಸಿತು ಅಲ್ಲಿ
ಕವಿತೆಗಳ ಕಾವ್ಯರಾಶಿ!
ನೋಡಿದೆನು ನಾನು
ನದಿಯೊಂದು ಹರಿದು
ಸೇರುವುದು ಕಡಲಪಾತ್ರ __
ನೋಡಿದೆನು ತಿರುಗಿ
ಕಾಣಿಸಿತು ಅಲ್ಲಿ
ಜೀವನದ ಛಾಯೆ ಮಾತ್ರ!
ಜಲಪಾತವಾಗಿ
ಭೋರ್ಗರೆದು ಹರಿದ
ಚಂಚಲತೆಯನ್ನು ತೊರೆದು
ನದಿ ಶಾಂತವಾಗಿ
ಬರಿದಾಗುತಿತ್ತು
ತನ್ನೆಲ್ಲವನ್ನೂ ಸುರಿದು!
ಸಿ ಪಿ ರವಿಕುಮಾರ್
ಡಿಸೆಂಬರ್ ೧೩, ೨೦೨೫

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ