ಅರ್ಪಣೆ



ಮೂಲ: ಜಾಯ್ ಆಸ್ಬಾರ್ನ್
ಕನ್ನಡಕ್ಕೆ.: ಸಿ ಪಿ ರವಿಕುಮಾರ್ 

ತೊಡಗಿರುತ್ತಾರಲ್ಲ ನಿಶ್ಶಬ್ದ ಕದನದಲ್ಲಿ 
ಬದುಕುತ್ತ  ಮುಚ್ಚಿದ ಕದಗಳ ನೇಪಥ್ಯದಲ್ಲಿ
ಈ ಕವಿತೆ ಅಂಥವರಿಗಾಗಿ

ಮರೆಮಾಚಲು ನೋವನ್ನು  ನಗೆಮುಸುಕು ತೊಟ್ಟು
ಇವರ ಮುಗುಳ್ನಗೆ ನೆರಳು ಗಾವುದದಷ್ಟು  
ಈ ಕವಿತೆ ಅಂಥವರಿಗಾಗಿ

ಮುರಿದ ರೆಕ್ಕೆಯ ಹಕ್ಕಿಗಳು ಆದರೂ
ಬೆಳಗಾಗ ಹಾಡುವ ಧೈರ್ಯ ತೋರುವರು
ಈ ಕವಿತೆ ಅಂಥವರಿಗಾಗಿ

ಸ್ವಾಗತಿಸಿ ದಿವಸವು ತರುವ ಕಷ್ಟ ಶಾಖೋಪಶಾಖೆ
ಎಲ್ಲದರಲ್ಲೂ ಕಾಣುವರಲ್ಲ ಹೊಂಬೆಳಕಿನ ರೇಖೆ 
ಈ ಕವಿತೆ ಅಂಥವರಿಗಾಗಿ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ