ಕಾಮನಬಿಲ್ಲು

ಮೂಲ ಹಿಂದಿ ... ಕಾಮಿನಿ ಕೌಶಲ್
ಕನ್ನಡಕ್ಕೆ ... ಸಿ.ಪಿ. ರವಿಕುಮಾರ್
Top View Photo of Food Dessert
ಯೋಚಿಸುತ್ತಾ ಮಲಗಿದ್ದೆ ಇರುಳಿನಲಿ ಹಾಗೇ
ಯಾಕೋ ನಿದ್ದೆಯೇ ಹತ್ತದಾದಾಗ ಕಣ್ಣಿಗೆ
ಅದೆಷ್ಟು ಬಣ್ಣದ ಖಾದ್ಯ ಕಬಳಿಸಿದೆ ನಾನು
ಬೆಳಗಿಂದಲೂ ಆರ್ಡರ್ ಮಾಡುತ್ತ, ಬಗೆಬಗೆ!

ಎದ್ದಾಗ ಕುಡಿದ ಹಾಲು ಬಿಳಿಬಣ್ಣ
ತಿಳಿಹಳದಿ ಬಣ್ಣ ನಾ ತಿಂದ ಬೆಣ್ಣೆ
ಕೇಸರಿಬಣ್ಣದ ಕಿತ್ತಳೆಹಣ್ಣು
ಕಚ್ಚಿದೆ ಕೆಂಪು ಸೇಬಿನ ಕೆನ್ನೆ

ಗುಲಾಬಿ ಬಣ್ಣದ ಐಸ್ ಕ್ರೀಮ್ ಸವಿದೆ
ಕಂದು ಬಣ್ಣ ಚಾಕೊಲೆಟ್ ಮೆದ್ದೆ |
ಹಸಿರುದಂಟು ಸೊಪ್ಪಿನ ಬಿಸಿಬಿಸಿ ಸಾರು
ಜೊತೆಗೆ ಕಡುಗಪ್ಪು ರಾಗಿಮುದ್ದೆ

ಅಬ್ಬಾ ಇಷ್ಟೆಲ್ಲಾ ತಿಂದೆನೇ ನಾನು!
ಒಡೆದರೆ ಹೊಟ್ಟೆಯು ಅಯ್ಯೋ ಗತಿ ಏನು!
ಒಡೆದೇ ಹೋದರೆ ಹೊಟ್ಟೆಯು ಡೊಳ್ಳು
ಹೊರಗೆ ಬರುವುದೇ ಕಾಮನಬಿಲ್ಲು!



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)