ವಿಜಯಿಗಳು

ಮೂಲ ಚೈನೀಸ್ : ಯಾವೋ ಫೆಂಗ್ 
ಕನ್ನಡಕ್ಕೆ : ಸಿ. ಪಿ. ರವಿಕುಮಾರ್ 

(ಟಿಪ್ಪಣಿ: ಎವರೆಸ್ಟ್ ಪರ್ವತಕ್ಕೆ ಚೈನಾದಲ್ಲಿ ಚೋಮೋಲಂಗ್ಮಾ ಎಂಬ ಹೆಸರಿದೆ)
Image result for everest

ಎವರೆಸ್ಟ್ ಪರ್ವತವನ್ನು ಹತ್ತಿದವರಲ್ಲಿ 
ಬಹಳಷ್ಟು ಮಂದಿ ಸಾವನ್ನಪ್ಪಿದರು ಅರ್ಧದಲ್ಲೇ 
ಉಳಿದವರು ತುದಿಯನ್ನೇರಿ 
ಬಾವುಟ ಬೀಸಿ ನೋಡುತ್ತಾ ಲೆನ್ಸ್ ಕಡೆಗೆ  
ಜಾಹೀರು ಮಾಡಿದರು ಜಗತ್ತಿಗೆ 
ತುತ್ತತುದಿಯ ಮೇಲೆ ತಮ್ಮ ವಿಜಯ ಸಾಧನೆ
ಕಡೆಗಣಿಸಿತು ಕ್ಯಾಮೆರಾ ಕಣ್ಣು 
ಮೂಲೆಯಲ್ಲಿ  ಸುಮ್ಮನೇ  ನಿಂತಿದ್ದ ಶೇರ್ಪಾಗಳನ್ನು 
ಅವರು ಕೂಲಿಗಳು, ಬರುವುದಿಲ್ಲ ವಿಜಯಿಗಳ ಲೆಕ್ಕದಲ್ಲಿ 
ಎರಡು ಸಾವಿರ ಡಾಲರ್ ಇಟ್ಟರೆ ಕೈಯಲ್ಲಿ 
ಯಾವುದೇ ವಿಜಯಿಗೆ  ನೀಡುತ್ತಾರೆ ಸಹಾಯ 
ಚೋಮೋಲಂಗ್ಮಾ ಮೇಲೆ ಸಾಧಿಸಲು ವಿಜಯ 


ಕಾಮೆಂಟ್‌ಗಳು

  1. CONQUERORS
    Among those who climbed Mount Everest
    quite a few died halfway up
    The survivors ascended the summit
    Facing the lens, they waved a flag
    let the whole world know
    their conquest of the world’s first peak
    The lens only left out the Sherpas
    standing silently in a corner there
    They were porters, not counted as conquerors
    Pay them two thousand US dollars
    and they would help any conqueror
    conquer Chomolungma
    (Yao Feng)

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)