ಪ್ರೀತಿ (ಪಾಬ್ಲೊ ನೆರೂಡಾ)

 ಪ್ರೀತಿ


ಪಾಬ್ಲೋ ನೆರೂಡಾ

ಅನುವಾದ: ಸಿ. ಪಿ. ರವಿಕುಮಾರ್



ನೀನೊಂದು ಉಪ್ಪಿನ ಗುಲಾಬಿಯೋ, ನೀಲಮಣಿಯೋ 
ಬೆಂಕಿ ಪ್ರವಹಿಸುವ ಕಾರ್ನೇಷನ್ ಹೂಗಳ ಬಾಣವೋ
ಎಂಬಂತೆ ನಿನ್ನನ್ನು ಪ್ರೀತಿಸುವುದಿಲ್ಲ ನಾನು. 
ಹೇಗೆಂದರೆ ನಿನ್ನ ಕುರಿತಾದ ನನ್ನ ಪ್ರೀತಿ
ನೆರಳು ಮತ್ತು ಆತ್ಮಗಳಂತೆ ಅಮೂರ್ತವಾದದ್ದನ್ನು
ನಾವು ಗುಪ್ತವಾಗಿ ಪ್ರೀತಿಸುವುದಿಲ್ಲವೇ ಹಾಗೆ.


ತಾನೇ ಅರಳದಿದ್ದರೂ ಗಿಡವು ಹೊರುವುದಿಲ್ಲವೇ
ತನ್ನಲ್ಲಿ ಬಚ್ಚಿಟ್ಟುಕೊಂಡ ಹೂವುಗಳ ಬೆಳಕನ್ನು
ಹಾಗಿದೆ ನಿನ್ನನ್ನು ಕುರಿತಾದ ನನ್ನ ಪ್ರೀತಿ.
ಮಣ್ಣಿನಿಂದ ಎದ್ದ ಗಾಢ ಸುಗಂಧ
ನನ್ನೊಳಗೆ ಎಲ್ಲೋ ಮಂಕಾಗಿ ಮನೆಮಾಡಿರಲು
ಕಾರಣವೇ ನಿನ್ನ ಪ್ರೀತಿ.


ನಿನ್ನನ್ನು ಕುರಿತಾದ ನನ್ನ ಪ್ರೀತಿ ಅರಿಯದು 
ಹೇಗೆ ಯಾವಾಗ ಎಲ್ಲಿಂದ ಎಂಬ ಪ್ರಶ್ನೆಗಳ ಉತ್ತರ.
ಗರ್ವವಿಲ್ಲ ಅದರಲ್ಲಿ ,ತೊಡಕಿಲ್ಲ,
ಏನಿದ್ದರೂ ನೇರ ಪ್ರೀತಿ ಮಾತ್ರ.


ಹೀಗೇಕೆ ಪ್ರೀತಿಸುವೆ ನಾನೆಂದು ಕೇಳಿದರೆ
ಅರಿಯೆ ನಾನು ಬೇರಾವ ರೀತಿ.
ಪ್ರೇಮದ ಈ ರೂಪದಲ್ಲಿ ಮಾತ್ರವೇ ನಾನು
ಮತ್ತು ನೀನೂ ಕೂಡಾ ಇರಬಲ್ಲೆವು
ತೀರಾ ಸನಿಹಕ್ಕೆ ಬಾರದಂತೆ
ಎಷ್ಟು ಸನಿಹವೆಂದರೆ ನಿನ್ನ ಕೈಯಿದೆ ನನ್ನೆದೆಯ ಮೇಲೆ
ಮತ್ತು ನನ್ನ ಕನಸುಗಳನ್ನು ಹೊತ್ತು ಮುಚ್ಚುವುವು ನಿನ್ನ ಕಣ್ಣೆವೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)