ಬರೆಯುವುದು (ಚಾರ್ಲ್ಸ್ ಬ್ಯುಕೋವ್ಸ್ಕಿ)
ಬರೆಯುವುದು
ಮೂಲ: ಚಾರ್ಲ್ಸ್ ಬ್ಯುಕೋವ್ಸ್ಕಿ
ಅನುವಾದ: ಸಿ ಪಿ ರವಿಕುಮಾರ್
ಬಹಳ ಸಲ ಅದು ನಿನಗೂ ಮತ್ತು
ಅಸಾಧ್ಯಕ್ಕೂ ನಡುವೆ ಇರುವ ವಸ್ತು.
ಯಾವ ಮದಿರೆಯೂ ಹೆಣ್ಣಿನ ಪ್ರೀತಿಯೂ
ಅದಕ್ಕೆ ಆಗಲಾರದು ಸಾಟಿ.
ಬೇರೆ ಏನೂ ನಿನ್ನನ್ನು ಕಾಪಾಡಲಾರದು
ಬರವಣಿಗೆಯ ವಿನಾ.
ಗೋಡೆಗಳು ಕುಸಿಯವುದನ್ನು
ಗುಂಪುಗಳು ಬಂದು ಸುತ್ತುವರೆಯುವುದನ್ನು
ತಡೆಯಬಲ್ಲದಾದರೆ ಅದೇ.
ಅದು ಕತ್ತಲನ್ನು ಸೀಳಬಲ್ಲದು.
ಬರವಣಿಗೆಯು ಅತ್ಯುಚ್ಚ ಮನೋವೈದ್ಯ.
ದೈವಗಳಲ್ಲಿ ಅತ್ಯಂತ ದಯಾಮಯಿ ದೈವ.
ಸಾವನ್ನು ಹಿಂಬಾಲಿಸುತ್ತದೆ ಬರವಣಿಗೆ
ಸೋತು ಕೈಚೆಲ್ಲದೆ ಎಂದೂ.
ಮತ್ತು
ತನ್ನಕಡೆ ನೋಡುತ್ತಾ
ನೋವನ್ನು ನೋಡುತ್ತಾ
ಬರವಣಿಗೆ ನಗುತ್ತದೆ.
ಅದು ಕೊಟ್ಟಕೊನೆಯ ಅಪೇಕ್ಷೆ
ಮತ್ತು ಕಟ್ಟಕಡೆಯ ವಿವರಣೆ.
ಬರವಣಿಗೆ ಎಂದರೆ ಅದೇ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ