ಮರೆಯದಿರು ನನ್ನನ್ನು (ಪಾಬ್ಲೋ ನೆರುಡಾ)
ಮರೆಯದಿರು ನನ್ನನ್ನು
ಮೂಲ: ಪಾಬ್ಲೋ ನೆರುಡಾ
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್
ನನ್ನದೊಂದು ಅರಿಕೆ ಇದೆ ನಿನ್ನೊಳಗೆ.
ನಿನಗೆ ಗೊತ್ತೇ ಇದೆ: ನಾನು
ದಿಟ್ಟಿಸಿದಾಗ ಸ್ಫಟಿಕಚಂದ್ರನನ್ನು
ಅಥವಾ ನನ್ನ ಕಿಟಕಿಯ ಸರಕುಗಳ ಹೊರಗೆ
ತೆವಳುವ ಶಿಶಿರದ ಕೆಂಪು ಟೊಂಗೆಯನ್ನು,
ಮುಟ್ಟಿದಾಗ ಬೆಂಕಿಯ ಬಳಿ ಉದುರಿ ಬೆರಳಿಗೆ
ಸಿಕ್ಕಿದರೂ ಸಿಕ್ಕದ ಬೂದಿಯನ್ನು
ಅಥವಾ ನೇವರಿಸಿದಾಗ ಸುಕ್ಕುಗಟ್ಟಿದ ಮರದ ಕಾಂಡ,
ಇವೆಲ್ಲವೂ ಕರೆದೊಯ್ಯುವುದು ನನ್ನನ್ನು ನಿನ್ನ ಬಳಿಗೇ.
ನಿನಗೆ ಗೊತ್ತೇ ಇದೆ: ನಾನು
ದಿಟ್ಟಿಸಿದಾಗ ಸ್ಫಟಿಕಚಂದ್ರನನ್ನು
ಅಥವಾ ನನ್ನ ಕಿಟಕಿಯ ಸರಕುಗಳ ಹೊರಗೆ
ತೆವಳುವ ಶಿಶಿರದ ಕೆಂಪು ಟೊಂಗೆಯನ್ನು,
ಮುಟ್ಟಿದಾಗ ಬೆಂಕಿಯ ಬಳಿ ಉದುರಿ ಬೆರಳಿಗೆ
ಸಿಕ್ಕಿದರೂ ಸಿಕ್ಕದ ಬೂದಿಯನ್ನು
ಅಥವಾ ನೇವರಿಸಿದಾಗ ಸುಕ್ಕುಗಟ್ಟಿದ ಮರದ ಕಾಂಡ,
ಇವೆಲ್ಲವೂ ಕರೆದೊಯ್ಯುವುದು ನನ್ನನ್ನು ನಿನ್ನ ಬಳಿಗೇ.
ಸೃಷ್ಟಿಯ ಎಲ್ಲ ವಾಸನೆಗಳು, ಬೆಳಕು, ಲೋಹಗಳು,
ಎಲ್ಲವೂ ಪುಟ್ಟ ದೋಣಿಗಳಾಗಿ ಚಲಿಸುತ್ತವೆ
ನನಗಾಗಿ ಕಾದಿರುವ ನಿನ್ನ ದ್ವೀಪಗಳ ಕಡೆಗೆ.
ಎಲ್ಲವೂ ಪುಟ್ಟ ದೋಣಿಗಳಾಗಿ ಚಲಿಸುತ್ತವೆ
ನನಗಾಗಿ ಕಾದಿರುವ ನಿನ್ನ ದ್ವೀಪಗಳ ಕಡೆಗೆ.
ಆದರೆ
ಬತ್ತಿಹೋದರೆ ನನ್ನ ಕುರಿತಾದ ನಿನ್ನ ಪ್ರೀತಿಯ ಒರತೆ
ನಿಧಾನವಾಗಿ ಬತ್ತಿ ಹೋಗುವುದು ನನ್ನ ಪ್ರೀತಿಯ ಸೆಲೆ.
ಮರೆತೆಯಾದರೆ ನನ್ನನ್ನು ಅರಸದಿರು ನನ್ನನ್ನು
ಮರೆತರೆ ನನ್ನನ್ನು ಅರಸಲು ಹೋಗದಿರು ಏಕೆಂದರೆ
ನಾನು ಆಗಲೇ ಮರೆತುಬಿಟ್ಟಿರುತ್ತೇನೆ ನಿನ್ನನ್ನು.
ನೀನು ದೀರ್ಘವಾಗಿ ಯೋಚಿಸಿ ನೋಡು :
ಬಾವುಟಗಳನ್ನು ಹಾದು ಬಂದು ನನ್ನ ಬಾಳಲ್ಲಿ ಬೀಸುವ ಗಾಳಿಯೇ
ತ್ಯಜಿಸುವೆಯಾದರೆ ನನ್ನನ್ನು
ನನ್ನ ಬೇರುಗಳಿರುವ ಹೃದಯದ ತೀರದಲ್ಲಿ
ನೆನಪಿರಲಿ, ಅಂದೇ ಅದೇ ಘಳಿಗೆ
ನಾನು ಮೇಲೆತ್ತುವೆನು ನನ್ನ ತೋಳುಗಳನ್ನು ಮತ್ತು
ನನ್ನ ಬೇರುಗಳು ವಲಸೆ ಹೊರಡುತ್ತವೆ
ಬೇರೊಂದು ನಾಡನ್ನು ಅರಸಿ.
ಬತ್ತಿಹೋದರೆ ನನ್ನ ಕುರಿತಾದ ನಿನ್ನ ಪ್ರೀತಿಯ ಒರತೆ
ನಿಧಾನವಾಗಿ ಬತ್ತಿ ಹೋಗುವುದು ನನ್ನ ಪ್ರೀತಿಯ ಸೆಲೆ.
ಮರೆತೆಯಾದರೆ ನನ್ನನ್ನು ಅರಸದಿರು ನನ್ನನ್ನು
ಮರೆತರೆ ನನ್ನನ್ನು ಅರಸಲು ಹೋಗದಿರು ಏಕೆಂದರೆ
ನಾನು ಆಗಲೇ ಮರೆತುಬಿಟ್ಟಿರುತ್ತೇನೆ ನಿನ್ನನ್ನು.
ನೀನು ದೀರ್ಘವಾಗಿ ಯೋಚಿಸಿ ನೋಡು :
ಬಾವುಟಗಳನ್ನು ಹಾದು ಬಂದು ನನ್ನ ಬಾಳಲ್ಲಿ ಬೀಸುವ ಗಾಳಿಯೇ
ತ್ಯಜಿಸುವೆಯಾದರೆ ನನ್ನನ್ನು
ನನ್ನ ಬೇರುಗಳಿರುವ ಹೃದಯದ ತೀರದಲ್ಲಿ
ನೆನಪಿರಲಿ, ಅಂದೇ ಅದೇ ಘಳಿಗೆ
ನಾನು ಮೇಲೆತ್ತುವೆನು ನನ್ನ ತೋಳುಗಳನ್ನು ಮತ್ತು
ನನ್ನ ಬೇರುಗಳು ವಲಸೆ ಹೊರಡುತ್ತವೆ
ಬೇರೊಂದು ನಾಡನ್ನು ಅರಸಿ.
ಆದರೆ ಪ್ರತಿದಿವಸವೂ
ನಾನೇ ನಿನ್ನ ವಿಧಿಯೆಂದು
ಯಾವುದೋ ಹೇಳಲರಿಯದ ಮಾಧುರ್ಯದಿಂದ
ಅನುಭವಿಸುವೆಯಾದರೆ ನೀನು,
ಪ್ರತಿದಿವಸವೂ ಒಂದು ಹೂವು
ನನ್ನನ್ನು ಸೇರಲು
ನಿನ್ನ ತುಟಿಗಳನ್ನೇರುವುದಾದರೆ
ಓ ಒಲವೇ,
ಓ ನನ್ನ ಒಲವೇ,
ನನ್ನೊಳಗೂ ಜ್ವಲಂತವಾಗುವುದು ಅದೇ ಅಗ್ನಿ,
ನಂದದೇ ಉರಿಯುವುದು ನನ್ನೊಳಗೆ
ಎಂದೂ ಮರೆಯದೆ.
ನನ್ನ ಪ್ರೇಮಕ್ಕೆ ನಿನ್ನ ಪ್ರೇಮವೇ ಜೀವಜಲ,
ನನ್ನೊಲವೇ,ನೀನು ಬದುಕಿರುವವರೆಗೂ
ಅದು ಇರುವುದು ನಿನ್ನ ತೋಳಲ್ಲೇ
ನನ್ನ ತೋಳುಗಳನ್ನು ಕ್ಷಣಕೂ ಬಿಟ್ಟಿರದೇ.
ನಾನೇ ನಿನ್ನ ವಿಧಿಯೆಂದು
ಯಾವುದೋ ಹೇಳಲರಿಯದ ಮಾಧುರ್ಯದಿಂದ
ಅನುಭವಿಸುವೆಯಾದರೆ ನೀನು,
ಪ್ರತಿದಿವಸವೂ ಒಂದು ಹೂವು
ನನ್ನನ್ನು ಸೇರಲು
ನಿನ್ನ ತುಟಿಗಳನ್ನೇರುವುದಾದರೆ
ಓ ಒಲವೇ,
ಓ ನನ್ನ ಒಲವೇ,
ನನ್ನೊಳಗೂ ಜ್ವಲಂತವಾಗುವುದು ಅದೇ ಅಗ್ನಿ,
ನಂದದೇ ಉರಿಯುವುದು ನನ್ನೊಳಗೆ
ಎಂದೂ ಮರೆಯದೆ.
ನನ್ನ ಪ್ರೇಮಕ್ಕೆ ನಿನ್ನ ಪ್ರೇಮವೇ ಜೀವಜಲ,
ನನ್ನೊಲವೇ,ನೀನು ಬದುಕಿರುವವರೆಗೂ
ಅದು ಇರುವುದು ನಿನ್ನ ತೋಳಲ್ಲೇ
ನನ್ನ ತೋಳುಗಳನ್ನು ಕ್ಷಣಕೂ ಬಿಟ್ಟಿರದೇ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ