ನನ್ನನ್ನಗಲಿ ಹೋಗದಿರು

 ಮೂಲ: ಪಾಬ್ಲೋ ನೆರುಡಾ

ಕನ್ನಡಕ್ಕೆ: ಸಿ. ಪಿ. ರವಿಕುಮಾರ್



ದೂರವೆಲ್ಲೂ ಹೋಗದಿರು ಒಂದೇ ದಿನವಾದರೂ ಏಕೆಂದರೆ

ಹೇಗೆ ಹೇಳಲಿ ನಾನು ದಿನವೊಂದು ಸುದೀರ್ಘ ಕಾಲಮಾನ
ನಾನು ಕಾಯುತ್ತಿರುವೆ ನಿನಗಾಗಿ, ಬೋಗಿಗಳು ಎಲ್ಲೋ ದೂರದಲ್ಲಿ ಮಲಗಿರುವ ಜನರಹಿತ ರೇಲ್ವೆ ನಿಲ್ದಾಣದಲ್ಲಿ ಕಾದಂತೆ

ದೂರವೆಲ್ಲೂ ಹೋಗದಿರು ಒಂದೇ ತಾಸಾದರೂ ಏಕೆಂದರೆ
ಆತಂಕದ ಸಣ್ಣ.ಹನಿಗಳು ಒಗ್ಗೂಡಿ ಬಿಡುವುವು ಆಗ
ಇರಲೊಂದು ಮನೆಗಾಗಿ ಅರಸುತ್ತಾ ಅಲೆಯುವ ಹೊಗೆ
ಹೊಕ್ಕು ನನ್ನೊಳಗೆ, ಕಳೆದುಹೋದ ಹೃದಯ ಉಸಿರುಗಟ್ಟುವುದು


ನಿನ್ನ ನೆರಳು ಎಂದೂ ಮರೆಯಾಗದಿರಲಿ ಕಡಲ ಕಿನಾರೆಯಲ್ಲಿ
ಮೀಟದಿರಲಿ ನಿನ್ನ ಕಣ್ಣೆವೆ ದೂರದ ಶೂನ್ಯದೊಳಗೆಂದೂ.
ನನ್ನ ಪ್ರಿಯತಮೆಯೇ ಒಂದು ಕ್ಷಣವೂ ನನ್ನನ್ನು ಅಗಲದಿರು
ಏಕೆಂದರೆ ಆ ಕ್ಷಣ ನೀನು ದಾಟಿಬಿಡುವೆ ಅದೆಷ್ಟು ದೂರ ಗೊತ್ತೇ,
ನಾನು ನಿನ್ನನ್ನು ಅರಸುತ್ತಾ ಭೂಮಿಯ ಚಕ್ರವ್ಯೂಹದಲ್ಲಿ
ಅಡ್ಡಾಡುತ್ತೇನೆ, ನೀನು ಮರಳಿ ಬರುವೆಯೋ ಇಲ್ಲ
ನನ್ನನ್ನು ಸಾಯಲು ಬಿಟ್ಟು ಹೋದೆಯೋ ಎಂದು ಪ್ರಶ್ನಿಸಿಕೊಳ್ಳುತ್ತಾ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)