ವಿರಮಿಸುವ ಹದ್ದು
ವಿರಮಿಸುವ ಹದ್ದು
ಮೂಲ: ಟೆಡ್ ಹ್ಯೂಸ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
ಕೂತಿರುವೆ ಕಾಡಿನ ಪರಮ ಉತ್ತುಂಗದಲ್ಲಿ ಕಣ್ಮುಚ್ಚಿ.
ಏನೂ ಕೆಲಸವಿಲ್ಲ, ಯಾವ ಕನಸುಗಳ ಅಡೆತಡೆಯಿಲ್ಲ
ನನ್ನ ಬಾಗಿದ ತಲೆಯಿಂದ ಹಿಡಿದು ಬಾಗಿದ ಕಾಲಿನವರೆಗೂ.
ನುರಿತ ಬೇಟೆಯ ನಂತರದ ಭೋಜನದ ತಾಲೀಮು ನಿದ್ದೆಯಲ್ಲಿ.
ಏನೂ ಕೆಲಸವಿಲ್ಲ, ಯಾವ ಕನಸುಗಳ ಅಡೆತಡೆಯಿಲ್ಲ
ನನ್ನ ಬಾಗಿದ ತಲೆಯಿಂದ ಹಿಡಿದು ಬಾಗಿದ ಕಾಲಿನವರೆಗೂ.
ನುರಿತ ಬೇಟೆಯ ನಂತರದ ಭೋಜನದ ತಾಲೀಮು ನಿದ್ದೆಯಲ್ಲಿ.
ಎತ್ತರದ ಮರಗಳ ಅನುಕೂಲವೇ ಅನುಕೂಲ!
ಗಾಳಿಯ ಇಂಬು ಮತ್ತು ಸೂರ್ಯನ ಬೆಳಕು
ಎರಡೂ ನನ್ನ ಪರವಾಗಿವೆ; ಭೂಮಿಯ ಮುಖ
ನನ್ನತ್ತ ತಿರುಗಿದೆ ತಕ್ಕಂತೆ ನನ್ನ ಅವಗಾಹನೆಗೆ.
ಗಾಳಿಯ ಇಂಬು ಮತ್ತು ಸೂರ್ಯನ ಬೆಳಕು
ಎರಡೂ ನನ್ನ ಪರವಾಗಿವೆ; ಭೂಮಿಯ ಮುಖ
ನನ್ನತ್ತ ತಿರುಗಿದೆ ತಕ್ಕಂತೆ ನನ್ನ ಅವಗಾಹನೆಗೆ.
ಮರದ ಒರಟು ತೊಗಟೆಗೆ ತೆಕ್ಕೆ ಹಾಕಿಕೊಂಡಿವೆ ಪಾದ.
ಸೃಷ್ಟಿಯ ಸಕಲ ಶಕ್ತಿಯೂ ವ್ಯಯವಾಯಿತು
ನನ್ನ ಪಾದದ, ನನ್ನ ಒಂದೊಂದೂ ಗರಿಯ ನಿರ್ಮಾಣಕ್ಕೆ.
ಈಗ ಸೃಷ್ಟಿಯು ಬಿದ್ದಿದೆ ನನ್ನ ಪದತಲದಲ್ಲಿ.
ಸೃಷ್ಟಿಯ ಸಕಲ ಶಕ್ತಿಯೂ ವ್ಯಯವಾಯಿತು
ನನ್ನ ಪಾದದ, ನನ್ನ ಒಂದೊಂದೂ ಗರಿಯ ನಿರ್ಮಾಣಕ್ಕೆ.
ಈಗ ಸೃಷ್ಟಿಯು ಬಿದ್ದಿದೆ ನನ್ನ ಪದತಲದಲ್ಲಿ.
ಬೇಕೆಂದರೆ ಹಾರುವೆ ಮೇಲೆ, ತಿರುಗಿಸುವೆ ಸೃಷ್ಟಿಯನ್ನು ಮೆಲ್ಲನೆ.
ನನಗೆ ಬೇಕಾದಲ್ಲಿ ಕೊಲ್ಲುವೆ, ಏಕೆಂದರೆ ಇವೆಲ್ಲ ನನ್ನದೇ.
ಯಾವ ನಯನಾಜೂಕು ಇಲ್ಲ ನನ್ನ ದೇಹದಲ್ಲಿ:
ತಲೆಗಳನ್ನು ಕಿತ್ತುಬಿಡುವುದು ನನ್ನ ಸಭ್ಯತೆ,
ನನಗೆ ಬೇಕಾದಲ್ಲಿ ಕೊಲ್ಲುವೆ, ಏಕೆಂದರೆ ಇವೆಲ್ಲ ನನ್ನದೇ.
ಯಾವ ನಯನಾಜೂಕು ಇಲ್ಲ ನನ್ನ ದೇಹದಲ್ಲಿ:
ತಲೆಗಳನ್ನು ಕಿತ್ತುಬಿಡುವುದು ನನ್ನ ಸಭ್ಯತೆ,
ಮೃತ್ಯುದಂಡನೆ ನೀಡುವುದು ನನ್ನ ಅಧಿಕಾರ.
ಜೀವಿಯ ಮೂಳೆಗಳ ಮೂಲಕವೇ ಹೋಗುವುದು
ನೇರವಾಗಿ ನನ್ನ ಹಾರಾಟದ ರೇಖೆ.
ಯಾವ ಪ್ರತಿವಾದವೂ ಇಲ್ಲದೆ ಸಿದ್ಧವಾಗಿದೆ ನನ್ನ ಹಕ್ಕು:
ಜೀವಿಯ ಮೂಳೆಗಳ ಮೂಲಕವೇ ಹೋಗುವುದು
ನೇರವಾಗಿ ನನ್ನ ಹಾರಾಟದ ರೇಖೆ.
ಯಾವ ಪ್ರತಿವಾದವೂ ಇಲ್ಲದೆ ಸಿದ್ಧವಾಗಿದೆ ನನ್ನ ಹಕ್ಕು:
ಸೂರ್ಯ ನಿಂತಿದ್ದಾನೆ ನನ್ನ ಬೆಂಬಲಕ್ಕೆ.
ನಾನು ಬಂದಲಾಗಾಯ್ತು ಏನೂ ಬದಲಾಗಿಲ್ಲ.
ಏನೂ ಬದಲಾಗಲು ಬಿಟ್ಟಿಲ್ಲ ನನ್ನ ಕಣ್ಣುಗಳು.
ಹೀಗೇ ಇಟ್ಟುಕೊಂಡಿರುವೆ ಮುಂದೆಯೂ ಎಲ್ಲ.
ನಾನು ಬಂದಲಾಗಾಯ್ತು ಏನೂ ಬದಲಾಗಿಲ್ಲ.
ಏನೂ ಬದಲಾಗಲು ಬಿಟ್ಟಿಲ್ಲ ನನ್ನ ಕಣ್ಣುಗಳು.
ಹೀಗೇ ಇಟ್ಟುಕೊಂಡಿರುವೆ ಮುಂದೆಯೂ ಎಲ್ಲ.
ಅದ್ಭುತ ಕವಿತೆ, ಚಂದದ ಅನುವಾದ 👌
ಪ್ರತ್ಯುತ್ತರಅಳಿಸಿನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು!
ಪ್ರತ್ಯುತ್ತರಅಳಿಸಿ