ದಾರಿ ತೋರುವ ಚಪ್ಪಲಿಗಳು
ಮೂಲ ... ಕಾಜಲ್ ಅಹ್ಮದ್ (ಕರ್ಡಿಸ್ತಾನ್ ಇರಾಕ್)
ಕನ್ನಡಕ್ಕೆ ... ಸಿ.ಪಿ. ರವಿಕುಮಾರ್
(ಇರಾಕ್ ದೇಶ ಅನೇಕ ರಾಷ್ಟ್ರಗಳಿಂದ ಬಹಿಷ್ಕಾರಕ್ಕೆ ಒಳಗಾದ ದೇಶ. ಬಹಳಷ್ಟು ದೇಶಗಳು ವ್ಯಾಪಾರ-ವಹಿವಾಟುಗಳ ವಿಷಯದಲ್ಲಿ ಇರಾಕ್ ದೇಶವನ್ನು ದೂರ ಇಟ್ಟಿವೆ. ಅನೇಕ ಯುವಕ-ಯುವತಿಯರು ತಮ್ಮ ದೇಶವನ್ನು ತೊರೆದು ಹೊರಡಲು ಸನ್ನದ್ಧರಾಗುವುದನ್ನು ಕಂಡಾಗ ಕವಯಿತ್ರಿಯ ಮನಸ್ಸು ಪ್ರತಿಕ್ರಯಿಸುತ್ತದೆ. ಹಿಂದೊಮ್ಮೆ ಬೆಟ್ಟಗಳನ್ನು ತೊರೆದು ನಗರಗಳಿಗೆ ಹೊರಟ ಜನರಂತೆಯೇ ತಾಯ್ನಾಡನ್ನು ತೊರೆದು ಜನ ಇನ್ನಿತರ ದೇಶಗಳಿಗೆ ಹೊರಟಿದ್ದಾರೆ. ಹಾಗೆ ಹೊರಟಾಗ ತಾಯ್ನಾಡಿನ ಹೃದಯದ (ರಾಜಧಾನಿ) ಮೂಲಕವೇ ವಿಮಾನ ಹತ್ತಿ ಹಾರಿಹೋಗಬೇಕು. ಹಾಗೆ ಹೋದ ಜನ ಪರದೇಶದಲ್ಲಿ ಸ್ವತಂತ್ರರಾಗಿ ತಲೆ ಎತ್ತಿ ಬದುಕುತ್ತಾರೆಯೇ? ಯಾರದೋ ಮನೆಯ ನೆಲಮಾಳಿಗೆಯಲ್ಲಿ ಗುಪ್ತವಾಗಿ ಬದುಕಬೇಕಾದ ಸಂದರ್ಭದಲ್ಲಿ ಸಿಲುಕಿಕೊಳ್ಳುವರೇ? ಅವರು ಕನಸಿದ ಬಣ್ಣಬಣ್ಣದ ಕಿಟಕಿಗಳ ಜಗತ್ತು ಅವರದ್ದಾದೀತೇ? ತಮ್ಮದೇ ದೇಶದಲ್ಲಿ ಅವರು ಇಂತಹ ಕನಸುಗಳನ್ನು ಕಾಣಲು ಸಾಧ್ಯವಿಲ್ಲವೇ?)
ಅವನು ಬೆಟ್ಟಗಳಿಗೆ ಹೋಗುತ್ತಿದ್ದ ಕಾಲದಲ್ಲಿ
ಶೂಗಳನ್ನು ಕಳಚಿಟ್ಟಾಗ
ಅವು ನಗರದ ಕಡೆ ಮುಖ ಮಾಡುತ್ತಿದ್ದವು.
ತನ್ನ ತಾಯ್ತಾಡು ಸ್ವತಂತ್ರವಾಗಲಿದೆ ಎಂಬುದೇ ಇದರರ್ಥ
ಎಂದೇನೂ ಅವನು ಭ್ರಮಿಸಲಿಲ್ಲ.
ಈಗ ಅವನು ನಗರದಲ್ಲೇ ವಾಸವಾಗಿದ್ದಾನೆ.
ಶೂಗಳನ್ನು ಕಳಚಿಟ್ಟಾಗ ಅವು ಮುಖ ಮಾಡುತ್ತವೆ
ದೂರದ ಯಾವುದೋ ನಾಡಿನ ಕಡೆಗೆ.
ಆದರೆ ಈಗಲೂ ಅವನು ಕನಸು ಕಾಣುವುದಿಲ್ಲ
ಒಂದು ದಿನ ಹೀಗೂ ಬರಬಹುದೆಂದು:
ತನ್ನ ಶೂಗಳ ದಿಗ್ದರ್ಶನವಿಲ್ಲದೆಯೇ
ನಾಡು ಬಿಟ್ಟು ಹೊರಡುವಾಗ
ಕಾಣುವ ಮರೀಚಿಕೆಯನ್ನೂ ಕಾಣದೆ
ತನ್ನ ದೇಶದ ಹೃದಯದ ಮೂಲಕವೇ ಹಾದು
ಮಿಥ್ಯೆಗಳನ್ನು ಅಜ್ಜಿಯ ಮರದ ಸಂದೂಕದಲ್ಲಿಟ್ಟು
ಸಂತೋಷ ತುಂಬಿದ ಯಾವುದೋ ಮನೆಯ ನೆಲಮಾಳಿಗೆಯಲ್ಲಿ
ತನ್ನ ನಾಡಿಗೆ ಮುಚ್ಚಿಯೇ ಬಿಡಬಹುದು ಬಣ್ಣ ಬಣ್ಣದ ಕಿಟಕಿ
ಹೇಗೆ ಮುಚ್ಚುತ್ತಿದ್ದವೋ ಕಿಟಕಿಗಳು
ಬಾಲ್ಯದ ಕತೆಗಳಲ್ಲಿ
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಬ್ಲಾಗ್ನ ನಿರ್ವಾಹಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿfreemake-video-converter-crack-2021
ಪ್ರತ್ಯುತ್ತರಅಳಿಸಿ