ಹೊಂದಿಕೆ

 ಮೂಲ: ಡೊರೀನ್ ನಿ ಘ್ರಿಯೋಫಾ
ಕನ್ನಡಕ್ಕೆ: ಸಿ ಪಿ ರವಿಕುಮಾರ್
 
ತಿಂಗಳಾನುಗಟ್ಟಲೆ ಕಲ್ಪಿಸಿಕೊಂಡೆ ಹೇಗಿರಬಹುದು ಎಂದು
ನನ್ನ ತೊಗಲಿನ ಕೆಳಗೆ
ಕೈಕಾಲುಗಳ ಗಂಟಿನಲ್ಲಿ ಕಾಣಿಸಿದ್ದು 
ಹರಿದಾಡುವ ನೆರಳುಗಳು ಮಾತ್ರ.
ಭಾಷಾಂತರಿಸಿ ಹೇಳಲು ಅಸಾಧ್ಯ: ಉಬ್ಬಿದ ಹೊಟ್ಟೆಯ ನಡುವೆ
ಅಲ್ಲಲ್ಲಿ ವಿರಾಮಚಿಹ್ನೆಗಳ ಹಾಗೆ ಮಂಡಿ ಮೊಳಕಾಲು;
ಗೋಲಿಯಂತೆ ಜಾರಿ ಹೋಗಿದ್ದೇನು ಅದು 
ಬಿಗಿಯಾಗಿ ಕಟ್ಟಿದ ಮುಷ್ಟಿ ಇರಬಹುದೇ 
ಅಥವಾ ಪೃಷ್ಠದ ಅಥವಾ ಪಾದದ ನಿಗೂಢ ಹೊರಳಾಟವೆ?

ಆದರೆ ನಸುಕು ಹೊರಗೆ ತಂದಾಗ
ನಿನ್ನನ್ನು ಕತ್ತಲಲೋಕದಿಂದ ಮೇಲೆತ್ತಿ 
ಹಲವಾರು ತಿಂಗಳು ಪ್ರಯತ್ನಿಸಿದೆ
ಚಿತ್ರದ ಹಲವು ಚೂರುಗಳನ್ನು ಒಟ್ಟುಗೂಡಿಸಲು :
ನಿನ್ನ ಪಾದದ ಕಮಾನು 
ನನ್ನ  ಅಂಗೈಯ ಹಳ್ಳದಲ್ಲಿ 
ಹೊಂದಿಕೊಳ್ಳುವುದು ಯಥಾವತ್ತು
ಮತ್ತು ನನ್ನ ಕುತ್ತಿಗೆಯ ಸಂದಿಯಲ್ಲಿ
ನೀನು ನಿನ್ನ ತಲೆಯನ್ನು ತೂರಿಸಿಕೊಂಡು ಮಲಗುತ್ತಿ
ಇದನ್ನೆಲ್ಲ ಕಂಡಾಗ ನನಗೆ ಉಂಟಾಯಿತು 
ನಾವಿಬ್ಬರೂ ಹೊಂದಿಕೊಳ್ಳುತ್ತೇವೆ 
ಹೇಳಿ ಮಾಡಿಸಿದಂತೆ ಎಂಬ ಜ್ಞಾನೋದಯ.

ಅನಂತರ ನೀನು ಬೆಳೆದೆ, ಪುಟ್ಟ ಅಪರಿಚಿತ,
ಮತ್ತು ನಿನ್ನನ್ನು ಅರಿಯಲು ನಾನು ಬೆಳೆದೆ.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ