ಜೋಗುಳ

 ಮೂಲ ಕವಿತೆ: ಸರೋಜಿನಿ ನಾಯ್ಡು
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್


ಜೀರಿಗೆಯ ಹೊಲದಿಂದ
ಬತ್ತದ ಗದ್ದೆಯ ಹಾದು
ಸುಳಿದಾಡಿ ತಾವರೆಕೆರೆ ಮೇಲೆ 
ತಂದಿರುವೆ ನಿನಗೆಂದು
ಇಬ್ಬನಿ ಹೊಳೆಯುವ ಒಂದು
ಸುಂದರ ಕನಸುಗಳ ಸರಮಾಲೆ

ಕಣ್ಮುಚ್ಚು ನನ್ನೊಲವೇ
ಕಾಣಿಸುವುದು ನೋಡು 
ಕಾಡಿನಲಿ ನರ್ತಿಸುವ ಮಿಂಚುಳ್ಳಿ
ಕದ್ದು ತಂದಿರುವೆನು
ನಿದ್ರಿಸಿದರೆ ಕೊಡುವೆ
ಕನಸುಗಳ ಸರಮಾಲೆ ಕೈಯಲ್ಲಿ

ಕಣ್ಮುಚ್ಚು ನನ್ನೊಲವೇ
ತಾರೆಗಳು ಮಿನುಗುತಿವೆ
ಚಂದಿರಮುಖದ ಸುತ್ತಾಮುತ್ತಾ
ನಿನ್ನ ಕಣ್ಣಿನ ಮೇಲೆ
ಕನಸುಗಳ ಸರಮಾಲೆ
ಏರಿಸಿ ನಾನಿಡುವೆ ಹೂಮುತ್ತ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)