ನಿನ್ನದಿದೆಷ್ಟೋ ನನ್ನದೂ ಅಷ್ಟೇ
ಮೂಲ .. ನಿದಾ ಫಾಜಲಿ
ಕನ್ನಡಕ್ಕೆ .. ಸಿ.ಪಿ. ರವಿಕುಮಾರ್

ನಮಗಿರುವುದು ಇದು ಒಂದೇ ಭೂಮಿ, ನಿನ್ನದಿದೆಷ್ಟೋ ನನ್ನದು ಅಷ್ಟೇ
ಸುಖದುಃಖಗಳ ರಂಗಿನರಾಟೆ ನಿನ್ನದಿದೆಷ್ಟೋ ನನ್ನದು ಅಷ್ಟೇ
ಅಕ್ಕಿಬೇಳೆಗಳ ತೂಗುವ ಕೈಯಿ ವಂಚನೆ ಮಾಡಿದರೇನೆನಬಹುದು?
ಒಳಗಿರುವುದು ಹೊರಗಿರುವುದು ಎಲ್ಲಾ ನಿನ್ನದಿದೆಷ್ಟೋ ನನ್ನದೂ ಅಷ್ಟೇ
ಪ್ರತಿಯೊಬ್ಬರೂ ಪಡೆದುದು ಬಾಳಲ್ಲಿ ಕಂಬನಿ, ಕನಸು, ಕಾಮನೆ, ಕಷ್ಟ
ಪ್ರತಿ ಉಸಿರಿನ ಹೊರೆಯೂ ಸಮಭಾರ, ನಿನ್ನದಿದೆಷ್ಟೋ ನನ್ನದೂ ಅಷ್ಟೇ
ಉಸಿರುಗಳೆಷ್ಟೋ ಅಷ್ಟೇ ಹರುಷ, ಪ್ರತಿಯೊಂದಕ್ಕೂ ಅದರದೆ ಲೆಕ್ಕ,
ಯುಗಯುಗಗಳ ಇತಿಹಾಸ ಸಮುದ್ರ, ನಿನ್ನದದೆಷ್ಟೋ ನನ್ನದೂ ಅಷ್ಟೇ
ಸುಖನೆಮ್ಮದಿ ಬಟವಾಡೆಯವರೆಗೆ ಮಾತ್ರವೇ ಮೇಲು-ಕೀಳಿನ ಸೂತ್ರ
ಪ್ರಳಯವು ಎಂದೋ ಎನ್ನುವ ಭೀತಿ ನಿನ್ನದದೆಷ್ಟೋ ನನ್ನದೂ ಅಷ್ಟೇ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ