ಒದ್ದೆಕಣ್ಣಿಂದ ಒರೆಸಿ ಕಣ್ಣೀರು

ಮೂಲ ... ಸಾಹಿರ್‌ ಲೂಧಿಯಾನವಿ
ಕನ್ನಡಕ್ಕೆ ... ಸಿ.ಪಿ.ರವಿಕುಮಾರ್
Empty Road Between Trees
ಒದ್ದೆಕಣ್ಣಿಂದ ಒರೆಸಿ ಕಣ್ಣೀರು ಮುಗುಳುನಗೆಯ ಹರಡು ನೋಡೋಣ
ನತಶಿರರಿಂದ ಏನೂ ಸಾಧಿಸದು, ತಲೆಯ ಮೇಲೆತ್ತಿ ನಿಲ್ಲು ನೋಡೋಣ

ಸಿಕ್ಕದು ಬಾಳು ಭಿಕ್ಷೆಯಲ್ಲೆಂದೂ, ಕಸಿಯಬೇಕು ಅದನ್ನು ಮುನ್ನುಗ್ಗಿ,
ಕ್ರೂರ ಜಗದಿಂದ ನಿನ್ನ ಹಕ್ಕನ್ನು ಕಸಿದುಕೋ ಒಮ್ಮೆ ಮುಂದೆ ನೋಡೋಣ

ಬಣ್ಣವು ಜಾತಿ ಕುಲ ಧರ್ಮಗಳು, ಮಾನವತೆ ಎಲ್ಲದಕ್ಕೂ ಮೀರಿದುದು
ಸಹಮತ ನನ್ನ ಮಾತಿಗೆ ಇತ್ತು ನನ್ನ ಬಳಿ ಬಂದು ನಿಲ್ಲು ನೋಡೋಣ

ದ್ವೇಷವೇ ತುಂಬಿರುವ ವಿಶ್ವದೊಳು ಕಟ್ಟುವಾ ಪ್ರೀತಿ ತುಂಬಿದ ಗೂಡು
ಹೆಗ್ಗಳಿಕೆ ಏನು ದೂರ ನಿಲ್ಲುವುದು? ನಿಲ್ಲು ಬಳಿಸಾರಿ, ಆಗ ನೋಡೋಣ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)