ದೂರದಲಿ ನಿಂತು ಮಾತನಾದದಿರು
ಮೂಲ... ಸಾಹಿರ್ ಲುಧಿಯಾನವಿ
ಕನ್ನಡಕ್ಕೆ ... ಸಿ. ಪಿ. ರವಿಕುಮಾರ್
(ದೂರ್ ರೆಹ್ ಕರ್ ನ ಕರೋ ಬಾತ್ ... ಎಂಬ ಈ ಚಿತ್ರಗೀತೆಯನ್ನು ನೀವೂ ಕೇಳಬಹುದು. ಪ್ರೇಮಿಯೊಬ್ಬ ತನ್ನ ಪ್ರೇಮಿಕೆ ಯನ್ನು ಒಲಿಸಿಕೊಳ್ಳುವ ಸನ್ನಿವೇಶಕ್ಕಾಗಿ ಸಾಹಿರ್ ಎಷ್ಟು ಮಾದಕವಾದ ಗೀತೆಯನ್ನು ರಚಿಸಿದ್ದಾರೆ!)

ದೂರದಲಿ ನಿಂತು ಮಾತನಾಡದಿರು, ಬಾ ಬಳಿಗೆ
ಅವಿಸ್ಮರಣೀಯವಿಗೋ ರಾತ್ರಿ ಇದು, ಬಾ ಬಳಿಗೆ!
ನಿನ್ನ ಸ್ಪರ್ಶಕೆ ಕಾದು ಕಳೆದಿರುವೆನು ನಾನೊಂದು ಯುಗ
ಇನ್ನು ಕೇಳದು ನನ್ನ ಮಾತನು ಮನ, ಬಾ ಬಳಿಗೆ!
ಬೀಸುತಿಹ ಚಳಿಗಾಳಿಗೆ ಭುಗಿಲೇಳುವ ಆಸೆಗಳು
ಕೊಂದು ತೀರುವುದು ಮಳೆ ಸಿಂಚನವಿದು, ಬಾ ಬಳಿಗೆ!
ಹೀಗೆ ನನ್ನೊಳು ಏಕೆ ನಾಚಿಕೆ, ಸಂಕೋಚಗಳು?
ಬಾಳಸಂಗಾತಿಗಳು ನಾವು, ಇಗೋ, ಬಾ ಬಳಿಗೆ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ